ಮೈಸೂರು,ಫೆಬ್ರವರಿ,17,2021(www.justkannada.in) : ಮೇಯರ್ ಸ್ಥಾನ ನಮಗೆ ಬೇಕು ಅನ್ನುವುದೇನಿಲ್ಲ. ಜನರಿಗೆ ಕೊಟ್ಟ ಭರವಸೆ ಈಡೇರಿಸಲು ವೇದಿಕೆ ಬೇಕು ಅಷ್ಟೆ. ಎರಡು ಪಕ್ಷದವರು ಕುಳಿತು ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ. ನೂರಕ್ಕೆ ನೂರು ಜೆಡಿಎಸ್ ಜೊತೆ ಮೈತ್ರಿ ಆಗುತ್ತೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಜೆಡಿಎಸ್ ವರಿಷ್ಠರ ಬಳಿ ಮಾತುಕತೆ ನಡೆಸಲಿದ್ದಾರೆ
ಶಾಸಕ ಸಾ.ರಾ.ಮಹೇಶ್ ಭೇಟಿ ನಂತರ ಮಾತನಾಡಿದ ಅವರು, ನಾನು ಹಿಂದೆಯೇ ಹೇಳಿದಂತೆ ಮುಂದಿನ 5 ವರ್ಷದ ತೀರ್ಮಾನ ಸ್ಥಳಿಯವಾಗಿ ಆಗಿದೆ. ಆದರೆ, ಅದರ ಏರುಪೇರು ಸಹ ಆಗಿದೆ. ನಾವು ಮಾತನಾಡಿರುವಂತದ್ದು,ಸ್ಪಷ್ಟವಾಗಿದ್ದರೂ ಕೂಡ, ಕೆಲವೊಂದು ವಿಚಾರಗಳನ್ನ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಜನತಾದಳ ವರಿಷ್ಠರ ಬಳಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದರು.
ಬೇರೆಯವರ ಮಾತಿಗೆ ಉತ್ತರ ಕೊಡಬೇಕಾಗಿಲ್ಲ
ಮೈಸೂರಿನಲ್ಲಿ ಕಾಂಗ್ರೆಸ್, ಜೆಡಿಎಸ್ ಪಾಲಿಕೆ ಸದಸ್ಯರ ಸಭೆ ನಡೆಯಲಿದೆ. ಎಲ್ಲರ ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನವಾಗಲಿದೆ. ಜನರಿಗೆ ಕೊಟ್ಟ ಭರವಸೆ ಈಡೇರಿಸುವ ಸಲುವಾಗಿ ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದೇವೆ. ಬೇರೆಯವರ ಮಾತಿಗೆ ಉತ್ತರ ಕೊಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಳಿಯವಾಗಿ ಹೊಂದಾಣಿಕೆ ಸಿದ್ದರಾಮಯ್ಯ ಅವರ ಅಭ್ಯಂತರವಿಲ್ಲ
ನಿರೀಕ್ಷಿತ ಅನಿರೀಕ್ಷಿತ ಬೆಳವಣಿಗೆ ಏನಾಗುತ್ತೆ ನೋಡೋಣ. ಸಿದ್ದರಾಮಯ್ಯನವರ ಹೇಳಿಕೆ ರಾಜ್ಯಮಟ್ಟಕ್ಕೆ ಸಂಬಂಧಿಸಿದ್ದು. ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಅವರ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.
key words : Per hundred-One hundred-JDS-Alliance-Becoming-MLA-Tanveer Seth