ಮೈಸೂರು,ಅಕ್ಟೋಬರ್,3,2020(www.justkannada.in): ರೈತರ ಜಮೀನು ಪಡೆದು ನಂತರ ರೈತರ ಮಕ್ಕಳಿಗೆ ಉದ್ಯೋಗ ನೀಡುವುದಾಗಿ ಹೇಳಿ ಈಗ ಬೇರೆ ಕಡೆ ಉದ್ಯೋಗ ನೀಡುತ್ತಿರುವುದನ್ನ ವಿರೋಧಿಸಿ ಮೈಸೂರಿನಲ್ಲಿ ಏಷಿಯನ್ ಪೇಯಿಂಟ್ ಕಾರ್ಖಾನೆ ವಿರುದ್ಧ ಇಮ್ಮಾವು ರೈತರು ಇಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ಕೆಐಎಡಿಬಿಗೆ ರೈತರು ಭೂಮಿ ನೀಡಿದ್ದರು. ಈ ಹಿನ್ನೆಲೆ ಕಾರ್ಖಾನೆ ಆಡಳಿತ ಮಂಡಳಿ ರೈತರ ಮಕ್ಕಳಿಗೆ ಏಷಿಯನ್ ಪೇಂಟ್ಸ್ ಕಾರ್ಖಾನೆಯಲ್ಲಿ ಕೆಲಸ ನೀಡುವ ಭರವಸೆ ನೀಡಿತ್ತು. ಈ ನಡುವೆ ಕಾರ್ಖಾನೆಯಲ್ಲಿ 61 ರೈತ ಮಕ್ಕಳು ಉದ್ಯೋಗ ಪಡೆದಿದ್ದರು.
ಆದರೆ ಇದೀಗ ಟ್ರೈನಿಂಗ್ ಬಳಿಕ ಬೇರೆ ಕಾರ್ಖಾನೆಯಲ್ಲಿ ಕೆಲಸ ಮಾಡುವಂತೆ ನೋಟಿಸ್ ನೀಡಿದ್ದಾರೆ ಎಂಬ ಆರೋಪ ಏಷಿಯನ್ ಪೇಯಿಂಟ್ ಕಾರ್ಖಾನೆ ವಿರುದ್ಧ ಕೇಳಿಬಂದಿದ್ದು, ಹೀಗಾಗಿ ಇಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ಏಷಿಯನ್ ಪೇಂಟ್ಸ್ ಕಾರ್ಖಾನೆಯಲ್ಲೆ ಕೆಲಸ ನೀಡುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಒಪ್ಪಂದ ಮಾಡಿಕೊಳ್ಳುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಕಾರ್ಖಾನೆಗೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಮತ್ತಿತರರು ಪಾಲ್ಗೊಂಡಿದ್ದರು.
Key words: permanent –employment- Farmers- protest -against -Asian paint factory-mysore