ಡಿ.22ರಂದು ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ : ಸರ್ಕಾರ ಆದೇಶ

ಬೆಂಗಳೂರು,ಡಿಸೆಂಬರ್,20,2020(www.justkannada.in) : ಗ್ರಾಪಂ ಚುನಾವಣೆಯು ಎರಡು ಹಂತಗಳಲ್ಲಿ ಡಿ.22 ಮತ್ತು 27 ರಂದು ಚುನಾವಣೆ ನಡೆಯಲಿದ್ದು, ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಖಾಯಂ, ದಿನಗೂಲಿ, ಗುತ್ತಿಗೆ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕೆಂದು ಸರ್ಕಾರವು ಆದೇಶಿಸಿದೆ.Teachers,solve,problems,Government,bound,Minister,R.Ashok

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‍ಗಳು, ರಾಜ್ಯ ಸರ್ಕಾರದ ಹಾಗೂ ಖಾಸಗಿ ಕ್ಷೇತ್ರದ ಕೈಗಾರಿಕಾ ಸಂಸ್ಥೆ, ಸಹಕಾರ ಸಂಘದ ಕ್ಷೇತ್ರಗಳು, ಔಧ್ಯಮಿಕ ಸಂಸ್ಥೆಗಳು ಮತ್ತಿತರ ಸಂಸ್ಥೆಗಳಲ್ಲಿ ಅಂದರೆ ಹೋಟೆಲ್‍ಗಳು, ಪ್ಲಾಂಟೇಷನ್‍ಗಳು ಮತ್ತಿತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸಲು ಅನುಕೂಲವಾಗುವಂತೆ ಡಿ.22 ರಂದು ವೇತನ ಸಹಿತ ರಜೆ ನೀಡಬೇಕೆಂದು ಸರ್ಕಾರ ತಿಳಿಸಿದೆ.

ಅದೇಶದಂತೆ ಆಯಾ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಮೇಲೆ ಸೂಚಿಸಿದ ಸಂಸ್ಥೆಗಳ ಮಾಲೀಕರು, ವ್ಯವಸ್ಥಾಪಕರು ತಮ್ಮಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಡಿ.22 ಮತ್ತು ಡಿ.27 ರಂದು ವೇತನ ಸಹಿತ ರಜೆಯನ್ನು ನೀಡಲು ಈ ಮೂಲಕ ಆದೇಶಿಸಿದೆ.

Permanent-December 22nd-laborers-contract-workers-Vacation-pay-Government-order

ಉಲ್ಲಂಘಿಸಿದ್ದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1954 ರ ಕಲಂ 135 ಬಿ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

key words : Permanent-December 22nd-laborers-contract-workers-Vacation-pay-Government-order