ಬೆಂಗಳೂರು,ಜೂನ್,29,2021(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆ ಅನ್ ಲಾಕ್ ಮಾಡಲಾಗಿದ್ದು, ಅಂಗಡಿ-ಮುಂಗಟ್ಟು ತೆರೆಯೋದಕ್ಕೆ ಅವಕಾಶ ನೀಡಲಾಗಿದೆ. ಈ ಮಧ್ಯೆ ಕೊರೋನಾ ನಿಯಮಗಳನ್ನ ಪಾಲಿಸುವ ಮೂಲಕ ಮಾಲ್ ಗಳನ್ನ ತೆರೆಯಲು ಅವಕಾಶ ನೀಡುವಂತೆ ಮಾಲ್ ಗಳ ನಿಯೋಗ ಸಿಎಂ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಮಾಲ್ ಗಳ ನಿಯೋಗದ ಸದಸ್ಯರು, ಕೋವಿಡ್ ನಿಯಮ ಪಾಲಿಸಿ ಮಾಲ್ ಗಳನ್ನ ತೆರೆಯಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.
ಸಿಎಂ ಬಿಎಸ್ ವೈಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಗರುಡ ಮಾಲ್ ಸಿಇಒ ನಂದೀಶ್, ನಾವು ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಬದ್ಧರಿದ್ದೇವೆ. ಮಾಲ್ ಗಳನ್ನು ತೆರೆಯಲು ಅವಕಾಶ ನೀಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿದ್ದೇವೆ. ಜುಲೈ 5ರಿಂದ ಮಾಲ್ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.
ಲಾಕ್ ಡೌನ್ ನಿಂದ ಮಾಲ್ ಗಳಿಗೆ 2 ರಿಂದ 3 ಕೋಟಿ ನಷ್ಟ ಉಂಟಾಗಿದೆ. ರಾಜ್ಯದಲ್ಲಿ 84 ಮಾಲ್ ಗಳಿವೆ 3 ಲಕ್ಷ ಸಿಬ್ಬಂದಿ ಇದ್ದಾರೆ. ಮಾಲ್ ಗಳು ಸಂಕಷ್ಟಕ್ಕೆ ಒಳಗಾಗಿವೆ. ಇದರಿಂದಾಗಿ ಮಾಲ್ ಗಳ ಬಾಡಿಗೆ, ವಿದ್ಯುತ್ ಫಿಕ್ಸ್ಡ್ ಚಾರ್ಜ್ ಕೂಡ ಮನ್ನಾ ಮಾಡುವಂತೆ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
Key words: permission – open –malls- Submission – CM BS yeddyurappa