ಬೆಂಗಳೂರು,ಆಗಸ್ಟ್,17,2024 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ನಿರ್ಧಾರಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್, ಯಾವ ರೀತಿಯಲ್ಲಿ ಅನುಮತಿ ನೀಡಿದ್ದಾರೋ ಗೊತ್ತಿಲ್ಲ. ನಾವು ಸಿದ್ದರಾಮಯ್ಯ ಪರ ನಿಲ್ಲುತ್ತೇವೆ. ಕಾನೂನು ಮೂಲಕವೇ ನಾವು ಹೋರಾಟ ಮಾಡುತ್ತೇವೆ. ಸಿಎಂ, ಪಕ್ಷ, ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ ಸಿಎಂ ಲೀಗಲ್ ಟೀಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು,
ನೇರವಾಗಿ ಸಿದ್ದರಾಮಯ್ಯ ಯಾವುದರಲ್ಲೂ ಭಾಗಿಯಾಗಿಲ್ಲ. ರಾಜ್ಯಪಾಲರು ನೀಡಿದ್ದ ಶೋಕಾಸ್ ನೋಟಿಸ್ ಗೆ ವಿವರ ನೀಡಲಾಗಿದೆ. ಶೋಕಾಸ್ ನೋಟಿಸ್ ಗೆ ಎಳೆಎಳೆಯಾಗಿ ಉತ್ತರ ನೀಡಲಾಗಿದೆ. ಸಂಪುಟ ವಿವರಣೆ ಬಳಿಕವೂ ಪ್ರಾಸಿಕ್ಯಸನ್ ಗೆ ಅನುಮತಿ ನೀಡಿದ್ದಾರೆ. ಗವರ್ನರ್ ವಿರುದ್ದ ಕಾನೂನು ಹೋರಾಟ ಮಾಡುತ್ತೇವೆ. ಮುಡಾ ಹಗರಣದ ಸಂಬಂಧ ತನಿಖೆ ನಡೆಯುತ್ತಿದೆ. ತನಿಖೆ ನಡೆಯುವಾಗಲೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರ ನಿರ್ಧಾರ ಎಷ್ಟು ಸರಿ? ಮೇಲಿಂದ ರಾಜ್ಯಪಾಲರಿಗೆ ಒತ್ತಡ ಬಂದಿದೆ. ರಾಜ್ಯಪಾಲರ ಕಚೇರಿ ದುರ್ಬಳಕೆ ಆಗಿದೆ. ಸಿಎಂ ಮೌಖಿಕವಾಗಿ, ಪತ್ರ ವ್ಯವಹಾರ ಮಾಡಿಲ್ಲ. ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.
Key words: Permission, prosecution, CM, Home Minister, Dr. G. Parameshwar