ಬರಿಗೈಯಲ್ಲಿ ಬಂದವನಿಗೆ ಸಿಕ್ತು 94 ಲಕ್ಷ ರೂ. ಹಣ: ಮುಂದೇನಾಯ್ತು..?

ಬೆಂಗಳೂರು, ಸೆಪ್ಟಂಬರ್,14,2023(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಯಸದೇ ಬಂದ ಭಾಗ್ಯ ಎಂಬಂತೆ ಯುವಕನೋರ್ವನಿಗೆ 94 ಲಕ್ಷ ರೂ. ಸಿಕ್ಕಿದ್ದು, ಅದನ್ನ ವಾಪಸ್  ಮರಳಿಸದೇ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ನಗರದ ಚಂದ್ರ ಲೇಔಟ್ ನಲ್ಲಿ ಈ ಘಟನೆ ನಡೆದಿದೆ ವರುಣ್ ಎಂಬ ಯುವಕ 94 ಲಕ್ಷ ರೂ. ಸಿಕ್ಕಿದ್ದು ಆದರೆ ಆ ಹಣವನ್ನ ಪೊಲೀಸ್ ಠಾಣೆಗೂ ಒಪ್ಪಿಸದೇ  ಮಾಲೀಕರನ್ನ ಹುಡುಕಿ ಹವಣವನ್ನ ವಾಪಸ್ ನೀಡದೇ ತಾನೇ ತೆಗೆದುಕೊಂಡು ಹೋಗಿ ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

 ಆಗಿದ್ದೇನು…?

ನಗರದ ಚಂದ್ರ ಲೇಔಟ್ ನಿವಾಸಿಯಾಗಿರುವ ಪ್ರಮೋದ್ ಎಂಬುವವರು ಸೈಟ್ ಖರೀದಿಸಲು 94 ಲಕ್ಷ ರೂ. ಹಣ ಕೂಡಿಸಿಟ್ಟಿದ್ದರು. ಅದನ್ನ ತನ್ನ ಸ್ನೇಹಿತನ ಅಂಗಡಿಯಲ್ಲಿ ಎಣಿಸಿ ನಂತರ ವಕೀಲರ ಕಚೇರಿಗೆ ಹೋಗಿ ಸೈಟ್ ಖರೀದಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳೋಣ ಎಂದು ಬ್ಯಾಗ್ ​ನಲ್ಲಿ ಡಾಕ್ಯುಮೆಂಟ್ಸ್ ಇಟ್ಟು, ಬಾಕ್ಸ್​ನಲ್ಲಿ ಎಲ್ಲಾ ಹಣವನ್ನು ತುಂಬಿಸಿ ಹಣದ ಬಾಕ್ಸ್ ಅನ್ನು ತಂದು ಕಾರಿನಲ್ಲಿ ಇಡಲು ಮುಂದಾಗಿದ್ದರು.  ಕಾರಿನ ಬಳಿ ಬಂದ ಪ್ರಮೋದ್ ಕೈನಲ್ಲಿದ್ದ ಹಣದ ಬಾಕ್ಸ್ ಅನ್ನು ಅಪರಿಚಿತ ಆ್ಯಕ್ಟಿವಾ ಹೋಂಡಾ ಬೈಕ್ ಮೇಲಿಟ್ಟಿದ್ದಾರೆ. ಬಳಿಕ ಕಾರ್ ಡೋರ್ ಓಪನ್ ಮಾಡಿ ಸೈಟ್ ಖರೀದಿಗೆ ಬೇಕಿದ್ದ ದಾಖಲಾತಿ ಇದ್ದ ಬ್ಯಾಗನ್ನು ಮಾತ್ರ ಕಾರಿನಲ್ಲಿ ಹಾಕಿಕೊಂಡು ಪ್ರಮೋದ್ ತಮ್ಮ ಸ್ನೇಹಿತನ ಅಂಗಡಿಗೆ ಹೊರಟಿದ್ದಾರೆ.

ಮತ್ತೊಂದೆಡೆ ಪ್ರಮೋದ್ ಕಾರು ಹೊರಡುತ್ತಿದ್ದಂತೆ ಅದೇ ರಸ್ತೆಯಲ್ಲಿ ಬಂದ ವರುಣ್ ಎಂಬ ಯುವಕ ಪಾರ್ಕ್ ಮಾಡಿದ್ದ ತನ್ನ ಬೈಕ್​ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಬೈಕ್ ಮೇಲೆ ಒಂದು ಬಾಕ್ಸ್ ಸಿಕಿದ್ದು ಅದನ್ನು ತೆರೆದು ನೋಡಿದಾಗ ಕಂತೆ ಕಂತೆ ಹಣ ಸಿಕ್ಕಿದೆ.  ಹಣ ನೋಡುತ್ತಿದ್ದಂತೆ  ಹಣದ ಬಾಕ್ಸ್ ಸಮೇತ ವರುಣ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್​ನಲ್ಲಿ ಕೆಲಸ ಮಾಡುವ ವರುಣ್ ತನ್ನ ಶ್ರೀನಗರ ಮನೆಯಲ್ಲಿ ಹಣವನ್ನ ಬಚ್ಚಿಟ್ಟಿದ್ದಾನೆ.  94 ಲಕ್ಷ ರೂ. ಹಣ ಏನು ಮಾಡಬೇಕು ಎನ್ನುವ ಗೊಂದಲದಲ್ಲೇ ಐದು ದಿನ ಕಳೆದಿದ್ದಾನೆ. ಎಲ್ಲಿಯೂ ಹಣ ಖರ್ಚು ಮಾಡದೇ ಮನೆಯಲ್ಲಿ ಬಚ್ಚಿಟ್ಟಿದ್ದನು ಎನ್ನಲಾಗಿದೆ.

ಈ ಮಧ್ಯೆ ಪ್ರಮೋದ್  ಸ್ನೇಹಿತನ ಅಂಗಡಿಗೆ ಹೋಗಿ ಕಾರು ಪರಿಶೀಲಿಸಿದಾಗ ಹಣವಿಲ್ಲದಿರುವುದು ಗೊತ್ತಾಗಿದೆ.  ತಕ್ಷಣವೇ ಪ್ರಮೋದ್ ವಾಪಸ್  ಬಂದು ನೋಡಿದ್ದು ಆದರೆ ಬೈಕ್ ಹಾಗೂ ಹಣ ಎರಡೂ ಇರಲಿಲ್ಲ. ತಕ್ಷಣ ಪ್ರಮೋದ್ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಬೈಕ್ ಹೊರಟ ಮಾರ್ಗದ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ  ಆರೋಪಿ ವರುಣ್ ಸಿಕ್ಕಿ ಬಿದ್ದಿದ್ದಾನೆ. ಇದೀಗ 94 ಲಕ್ಷ ರೂ.ಹಣವನ್ನು ಜಪ್ತಿ ಮಾಡಲಾಗಿದೆ.

Key words:  Person -Rs 94 lakh- Money-arrset- Bangalore