ಮೈಸೂರು,ನವೆಂಬರ್,4,2021(www.justkannada.in): ಜನರ ಆಕ್ರೋಶದ ಬೆನ್ನಲ್ಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಇದೀಗ ಪೆಟ್ರೋಲ್-ಡೀಸೆಲ್ ದರ ಇಳಿಕೆ ಮಾಡಿದ್ದು ಈ ಕುರಿತು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಉತ್ತರ ಪ್ರದೇಶ ಸೇರಿದಂತೆ 6ರಾಜ್ಯಗಳ ಚುನಾವಣೆ ಹಿನ್ನೆಲೆ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿದ್ದಾರೆ. ಕೇವಲ 5ರೂ ಇಳಿಕೆ ಮಾಡಿ ಮತ್ತೆ ಬೆಲೆ ಏರಿಕೆ ಮಾಡ್ತಾರೆ. ಪ್ರತಿನಿತ್ಯ 40ರಿಂದ 50ಪೈಸೆ ಮತ್ತೆ ಹೆಚ್ಚಳ ಆಗುತ್ತೆ. ಮೋದಿ ಕೇವಲ ಜನರ ಕಣ್ಣೊರೆಸುವ ತಂತ್ರ ಮಾಡ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ದರ ಇಳಿಕೆಯಾಗಿದ್ದರೆ ಬಿಜೆಪಿಯವರು ಸಂಭ್ರಮಾಚರಣೆ ಮಾಡ್ತಿದ್ದಾರೆ. ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಜನರಿಂದ 60ರೂ ಸೆಸ್ ವಸೂಲಿ ಮಾಡಿ ಇಷ್ಟು ದಿನ ಲೂಟಿ ಮಾಡಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಜನರ ಆಡಳಿತ ವಿರೋಧಿ ಅಲೆ ಗೊತ್ತಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹಿನಾಯವಾಗಿ ಸೋತಿದೆ. ಜನವಿರೋಧಿ ಆಡಳಿತ ಮಾಡ್ತಿರುವ ಬಿಜೆಪಿಗೆ ಜನರು ತಕ್ಕಪಾಠ ಕಲಿಸಿದ್ದಾರೆ. ಹಾಗಾಗಿ ಮುಂದಿನ ಉತ್ತರಪ್ರದೇಶದ ಚುನಾವಣೆಗೆ ಬೆಲೆ ಇಳಿಕೆ ನಾಟಕ ಮಾಡ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಟೀಕಿಸಿದರು.
ಸಿಎಂ ಬೊಮ್ಮಾಯಿ ಕೂಡಾ ಬೆಲೆ ಇಳಿಕೆ ಮಾಡ್ತಿವಿ ಇದರಿಂದ ಬೊಕ್ಕಸಕ್ಕೆ 2100ಕೋಟಿ ನಷ್ಟ ಎಂದಿದ್ದಾರೆ. ಇದು ನಷ್ಟ ಅಲ್ಲ ಲೂಟಿ ಪ್ರಮಾಣ ಕಡಿಮೆ ಮಾಡಿದ್ದೀರಿ ಅಷ್ಟೇ. ಸಿದ್ದರಾಮಯ್ಯ ಸರ್ಕಾರದಲ್ಲಿ ಪೆಟ್ರೋಲ್ ಮೇಲೆ 7 ರೂ. ತೆರಿಗೆ ವಿಧಿಸಲಾಗಿತ್ತು. ಆದರೆ ನಿಮ್ಮ ಅರ್ಕಾರ 30ರೂ ತೆರಿಗೆ ಹಾಕಿದೆ. ನಿಮ್ಮ ಜನವಿರೋಧಿ ಆಡಳಿತಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
Key words: Petrol-diesel -price -reductions -KPCC spokesperson= M. Laxman -criticized