ರಾಜ್ಯಾದ್ಯಂತ  PFI ಮುಖಂಡರಿಗೆ ಮತ್ತೆ ಶಾಕ್ : 40ಕ್ಕೂ ಹೆಚ್ಚು ಮುಖಂಡರು ವಶಕ್ಕೆ.

ಬೆಂಗಳೂರು,ಸೆಪ್ಟಂಬರ್,27,2022(www.justkannada.in):  ರಾಜ್ಯಾದ್ಯಂತ ಪಿಎಫ್​ ಐ ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು 40ಕ್ಕೂ ಹೆಚ್ಚು ಮುಖಂಡರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿ, ಮೈಸೂರು, ಬಾಗಲಕೋಟೆ, ಬೀದರ್​, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಮಂಗಳೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಪಿಎಫ್​​ಐ ಮುಖಂಡರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಎನ್​ಐಎ ದಾಳಿ ನಡೆಸಿ ನೂರಕ್ಕೂ ಹೆಚ್ಚು ಪಿಎಫ್​ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಮತ್ತೆ ಕಾನೂನು & ಸುವ್ಯವಸ್ಥೆ ಎಡಿಜಿಪಿ ಅಲೋಕ್​ ಕುಮಾರ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು 40ಕ್ಕೂ ಹೆಚ್ಚು ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿ ಆರೋಪದಡಿ ವಶಕ್ಕೆ ಪಡೆಯಲಾಗಿದೆ.

Key words: PFI -leaders -across –state-More than- 40 leaders- arrested.

ENGLISH SUMMARY…

Another shock for PFI leaders across the State: More than 40 leaders arrested
Bengaluru, September 27, 2022 (www.justkannada.in): The police today raided the houses of PFI leaders across the State and arrested more than 40 of them and interrogating.
Raids were conducted on the PFI leaders in Belagavi, Shivamogga, Mysuru, Bagalkote, Bidar, Chamarajanagara, Chitradurga, Ramanagara, Mangaluru, Koppala, Ballari, Vijayapura and other places.
More than 100 PFI leaders were held in NIA raids a few days ago. Today another raid was conducted under the leadership of ADGP (Law and Order) Alok Kumar and more than 40 leaders have been taken into custody, under charges of intention to spread violence in the State.
Keywords: PFI/ 40 leaders held/ Alok Kumar/ raids