ಪಿಜಿಗೆ ನುಗ್ಗಿ ಪ್ರೇಯಸಿಯ ಸ್ನೇಹಿತೆಯನ್ನ ಹತ್ಯೆ ಮಾಡಿದ್ದ ಆರೋಪಿ ಬಂಧನ

ಬೆಂಗಳೂರು,ಜುಲೈ,27,2024 (www.justkannada.in): ಕಳೆದ ಮೂರ್ನಾಲ್ಕು ದಿನಗಳ ಹಿಂದೆ   ಬೆಂಗಳೂರಿನ ಕೋರಮಂಗಲದ ಬಳಿ ಪಿಜಿಗೆ ನುಗ್ಗಿ ಪ್ರೇಯಸಿಯ ಸ್ನೇಹಿತೆಯನ್ನ ಕೊಂದಿದ್ದ ಆರೋಪಿಯನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಭೋಪಾಲ್ ಮೂಲದ ಅಭಿಷೇಕ್ ಬಂಧಿತ ಆರೋಪಿ. ಈತನನ್ನು ಮಧ್ಯ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಿಹಾರ ಮೂಲದ ಕೃತಿ ಕುಮಾರಿ (24) ಕೊಲೆಯಾದ ಯುವತಿ.  ಖಾಸಗಿ ಕಂಪನಿಯಲ್ಲಿ ಡೆವಲಪ್‌ಮೆಂಟ್‌ ಅಸೋಸಿಯೇಟ್‌ ಆಗಿದ್ದ ಕೃತಿ ಕುಮಾರಿ ಮಾವೆಂಕಟಶಿವಾರೆಡ್ಡಿ ಲೇಔಟ್‌ನ ಭಾರ್ಗವಿ ಸ್ಟೇಯಿಂಗ್‌ ಹೋಮ್ಸ್‌ ಫಾರ್‌ ಲೇಡೀಸ್‌ ಪಿಜಿಯಲ್ಲಿ ವಾಸಿಸುತ್ತಿದ್ದರು.

ಈ ಮಧ್ಯೆ ಕೃತಿ ಕುಮಾರಿಯ ಗೆಳತಿಯನ್ನು ಅಭಿಷೇಕ್ ಪ್ರೀತಿಸಿದ್ದ. ಬಾಡಿಗೆ ಮನೆ ಮಾಡಿ ಆಕೆಯನ್ನು ಕೂಡಿ ಹಾಕಿದ್ದ. ವಿಷಯ ತಿಳಿದ ಕೃತಿ ಕುಮಾರಿ ಸ್ನೇಹಿತೆಯರ ಜೊತೆ ಹೋಗಿ ಆಕೆಯನ್ನ ಕರೆತಂದು ಪಿಜಿಯಲ್ಲಿರುವಂತೆ ಹೇಳಿದ್ದಳು.

ಈ ಹಿನ್ನೆಲೆಯಲ್ಲಿ  ತನ್ನ ಪ್ರೇಯಸಿಯನ್ನು ವಾಪಸ್ ಪಿಜಿಗೆ ಕರೆಸಿಕೊಂಡಿದ್ದಕ್ಕೆ ಕೋಪಗೊಂಡಿದ್ದ ಅಭಿಷೇಕ್ ಜುಲೈ 23ರ ರಾತ್ರಿ ಪಿಜಿಗೆ ನುಗ್ಗಿ ಕೃತಿ ಕುಮಾರಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದ . ಇದೀಗ ಕೋರಮಂಗಲ ಪೊಲೀಸರು ಆರೋಪಿಯನ್ನು ಮಧ್ಯ ಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Key words: PG, killed, girl, accused, arrest