ಬೆಂಗಳೂರು, ಅ.15, 2019 : (www.justkannada.in news) ‘ ಫೋನ್ ಪೇ ‘ ಆ್ಯಪ್‌ನಲ್ಲಿ ಕನ್ನಡ ತೆಗೆದುಹಾಕಲಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸರಣಿ ಟ್ವೀಟ್ ಮೂಲಕ ಪ್ರತಿಭಟನೆ ದಾಖಲಿಸುತ್ತಿದ್ದಾರೆ. ಆದರೂ ಸಂಸ್ಥೆ ಮಾತ್ರ ಸ್ಪಂಧಿಸುತ್ತಿಲ್ಲ.
ಫೋನ್ ಪೇ ವರ್ತನೆಗೆ ಬೇಸತ್ತ ನೆಟ್ಟಿಗರು ಸೋಷಿಯಲ್ ಮೀಡಿಯಾ ಮೂಲಕವೇ ಚಳಿ ಬಿಡಿಸಲು ಆರಂಭಿಸಿದ್ದಾರೆ. ಆ್ಯಪ್ ಅನ್ ಇನಸ್ಟಾಲ್ ಮಾಡಿಕೊಳ್ಳುವ ಮೂಲಕ ಪ್ರತಿಭಟನೆ ಬಿಸಿ ಮುಟ್ಟಿಸಲು ಕರೆ ನೀಡುತ್ತಿದ್ದಾರೆ. ಈ ಬೆಳವಣಿಗೆ ಸಲುವಾಗಿ ಟ್ವೀಟ್ ಮೂಲಕವೇ ಉತ್ತರಿಸಿರುವ ಫೋನ್ ಪೇ ಹೇಳಿರಿವುದಿಷ್ಟು….
‘ ನಮ್ಮ ಆ್ಯಪ್ ಕೆಲವೊಂದು ಭಾಷೆಗಳನ್ನು ಸಪೋರ್ಟ್ ಮಾಡುತ್ತಿಲ್ಲ. ಇದರಿಂದಾಗಿ ನಿಮಗೆ ತೊಂದರೆಯುಂಟಾಗಿದೆ ಎಂದು ನಮಗರ್ಥವಾಗುತ್ತಿದೆ. ಇಂಗ್ಲಿಷ್ ಭಾಷೆ ಆಯ್ಕೆ ಮಾಡುವ ಮೂಲಕ ನೀವು ಆ್ಯಪ್‌ನ್ನು ಬಳಕೆ ಮುಂದುವರಿಸಬೇಕೆಂದು ನಾವು ವಿನಂತಿ ಮಾಡುತ್ತಿದ್ದೇವೆ. ಯಾವುದೇ ಸಹಾಯ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ‘ ಎಂದು ಟ್ವೀಟಿಸಿದೆ.
ಆ ಮೂಲಕ ಬಲವಂತವಾಗಿ ಕನ್ನಡೇತರ ಭಾಷೆಯಲ್ಲಿ ಆ್ಯಪ್ ಬಳಸಿ ಎಂದು ಪ್ರಚೋಧಿಸುತ್ತಿದೆ. ಇದಕ್ಕೆ ಕನ್ನಡಿಗರು ಹೇಗೆ ಪ್ರತ್ಯುತ್ತರ ನೀಡುತ್ತಾರೋ ಕಾದು ನೋಡಬೇಕಿದೆ.
key words : phone.pay-kannnada-deleted-app-un.install-pro.kannada-netizens