ಮೈಸೂರು,ಡಿಸೆಂಬರ್,09,2020(www.justkannada.in) : ಕ್ರೀಡಾಪಟುಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮತೋಲನವಾಗಿ ಪೋಷಿಸುವ ನಿಟ್ಟಿನಲ್ಲಿ ಕ್ರೀಡಾ ಮನೋವಿಜ್ಞಾನವು ಬಹಳ ಸಹಕಾರಿಯಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ವಿವಿಯ ದೈಹಿಕ ಶಿಕ್ಷಣ ವಿಭಾಗದ ಯೋಗ ಸಭಾಂಗಣದಲ್ಲಿ ಬುಧವಾರ ‘ಕ್ರೀಡಾಪಟುಗಳ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳುವ ಸಲುವಾಗಿ ಕ್ರೀಡಾ ಪ್ರದರ್ಶನ ನಿರ್ವಹಣೆಯಲ್ಲಿ ಕ್ರೀಡಾ ಮನೋವಿಜ್ಞಾನದ ಪಾತ್ರ’ ವಿಷಯ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಮನೋವಿಜ್ಞಾನವು ಕ್ರೀಡಾಪಟುಗಳ ಅಭಿವೃದ್ಧಿ ಮತ್ತು ಸಾಮಾಜಿಕ, ಕ್ರೀಡಾ ಸಂಸ್ಥೆಗಳೊಂದಿಗೆ ಸಂಬಂಧಿಸಿದ ವ್ಯವಸ್ಥಿತ ಸಮಸ್ಯೆಗಳನ್ನು ಪರಿಹರಿಸಲು ಮಾನಸಿಕ ಜ್ಞಾನ ಮತ್ತು ಕೌಶಲ್ಯಗಳ ಅಭಿವೃದ್ದಿಗೆ ಪೂರಕವಾಗಿದೆ ಎಂದರು.
ಕ್ರೀಡಾಪಟುಗಳು ಮತ್ತು ತರಬೇತುದಾರರು, ನಿರ್ವಾಹಕರು, ಪೋಷಕರು ಹೀಗೆ ಪ್ರತಿಯೊಬ್ಬರಿಗೂ ಕ್ರೀಡಾ ಮನೋವಿಜ್ಞಾನ ಜ್ಞಾನ ಅಗತ್ಯ. ಕ್ರೀಡಾಪಟುಗಳ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಅರಿಯಲು ಮನೋವಿಜ್ಞಾನ ಕಲಿಕೆಯು ಸಹಕಾರಿಯಾಗಿದೆ. ಕ್ರೀಡೆಯ ನಿಯಮಗಳ ಅರಿತು ಅದನ್ನು ಅನುಸರಿಸುವ ನಿಟ್ಟಿನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಹಿಡಿತ ಸಾಧಿಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ಷಮತೆ ವರ್ಧನೆಗಾಗಿ, ವ್ಯಕ್ತಿತ್ವ ಹಾಗೂ ಕೌಶಲ್ಯ ತರಬೇತಿ, ಗುರಿ ನಿಗದಿ, ಯೋಜನೆ ಸಿದ್ಧಪಡಿಸುವಿಕೆ, ಏಕಾಗ್ರತೆ ಮತ್ತು ಸ್ವಯಂ ನಿಯಂತ್ರಣ ಸಾಧಿಸುವುದು, ಆತ್ಮವಿಶ್ವಾಸದ ಬೆಳವಣಿಗೆ, ಸ್ವಾಭಿಮಾನ, ಭಾವನೆಗಳ ನಿರ್ವಹಣೆ, ನಾಯಕತ್ವ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಆಹಾರ ಪದ್ಧತಿ, ಮಾದಕವಸ್ತು ಸೇವನೆ, ಖಿನ್ನತೆ, ಆತ್ಮಹತ್ಯೆ, ಅತಿಯಾದ ತರಬೇತಿ, ಲೈಂಗಿಕ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ತಂಡ ಕಟ್ಟುವಿಕೆ, ಕುಟುಂಬ ನಿರ್ವಹಣೆ, ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಮನೋವಿಜ್ಞಾನವು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಈಜುಗಾರ್ತಿ ಶುಭ ಚಿತ್ತರಂಜನ್, ದೈಹಿಕ ಶಿಕ್ಷಣ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ತಿರುಮಲೈ ಗೋಪಾಲನ್, ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಜಿ.ವೆಂಕಟೇಶ್ ಕುಮಾರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಉಪಸ್ಥಿತರಿದ್ದರು.
English summary….
Sports Psychological is helpful for athletes physical and mental health: MU VC
Mysuru, Dec. 09, 2020 (www.justkannada.in): “Sports Psychology is very helpful in balancing the physical and mental health of sportspersons,” opined Prof. G. Hemanth Kumar, Vice-Chancellor, Mysore University.
Speaking at a seminar on the topic, “Role of Sports Psychology in Management of Sports Shows for Physical and Mental Health of sportspersons,” organised by the Physical Education Department, Mysore University he said, “sports mental sciences is essential for all the people involved in sports like trainers, managers, caretakers, and sportsmen. It helps in knowing the physical and mental problems of the sportspersons. It also helps in understanding the rules of sports and following it and maintaining a healthy physical and mental balance,” he added.
International swimmer Shubha Chittaranjan, Physical Education Department Retired trainer Tirumalai Gopalan, Psychology Department lecturer G. Venkatesh Kumar and Physical Education Department Director Dr. P. Krishnaiah were present.
Keywords: Sports Psychology/ mental science/ Mysore University/ Physical Education Department
key words : physical-mental-health-athletes-Sports-Psychology-Cooperative-Chancellor-Prof.G.Hemant Kumar