ಮೈಸೂರು,ಸೆಪ್ಟಂಬರ್,16,2021(www.justkannada.in): ಸೆಪ್ಟೆಂಬರ್ 1 ರಂದು ನಾವು ಕೊಂಡೋತ್ಸವ ಮಾಡಿದ್ದೇವು. ಆದರೆ ಸೆಪ್ಟೆಂಬರ್ 8 ರಂದು ಅಧಿಕಾರಿಗಳು ಯಾವುದೇ ಮಾಹಿತಿ ಕೊಡದೆ ದೇವಾಲಯ ಒಡೆದಿದ್ದಾರೆ ಎಂದು ಹುಚ್ಛಗಣಿ ಗ್ರಾಮದ ಗ್ರಾಮಸ್ಥ ಹಾಗೂ ಮಹದೇವಮ್ಮ ದೇವಾಲಯ ಧರ್ಮಾಧಿಕಾರಿ ನರಸಿಂಹೇಗೌಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಾಲಯ ತೆರವುಗೊಳಿಸಿರುವುದನ್ನ ವಿರೋಧಿಸಿ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಹುಚ್ಚಗಣಿ ಗ್ರಾಮದ ಗ್ರಾಮಸ್ಥ ದೇವಾಲಯ ಧರ್ಮಾಧಿಕಾರಿ ನರಸಿಂಹೇಗೌಡ, ನಮ್ಮ ಸಣ್ಣ ಗ್ರಾಮದ ದೇವಾಲಯ ಕೆಡವಿದಕ್ಕೆ ವಿರೋಧಿಸಲು ಬೆಂಬಲವಾಗಿ ನಿಂತ ಹಿಂದೂ ಸಂಘಟನೆಗಳಿಗೆ ಚಿರಋಣಿ. ಆ ಸ್ಥಳಕ್ಕೆ 800 ವರ್ಷದ ಇತಿಹಾಸ ಇದೆ. ಸುಮಾರು 8,10 ತಲೆ ಮಾರಿನಿಂದ ನಾವು ನೋಡಿಕೊಂಡು ಬಂದಿದ್ದೇವೆ. ಮೊದಲಿಗೆ 30 ಕುಲ ಅಲ್ಲಿ ಇದ್ದವು. ಆಗಿಂದಲೂ ನ್ಯಾಯ ಸಮ್ಮತವಾಗಿ ನಡೆದುಕೊಂಡು ಬಂದಿದ್ದೇವೆ ಎಂದರು.
ಹುಚ್ಚಗಣಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಹೆಸರು ಮಾಡಿದೆ. ದೆಹಲಿಯಲ್ಲಿ ಪ್ರಧಾನಿ ಕೊರೊನಾ ತಡೆಯಲ್ಲಿ ಮೊದಲು ಎಂದು ಪ್ರಶಸ್ತಿ ಕೊಟ್ಟಿದ್ದಾರೆ. ಮೊದಲು ಮಹದೇವಮ್ಮ ದೇವಸ್ಥಾನ ಒಬ್ಬ ವ್ಯಕ್ತಿ ಮಾತ್ರ ಪೂಜೆ ಮಾಡುವಂತೆ ಇತ್ತು. ನಂತರ ನಮ್ಮ ಗ್ರಾಮದ ಜನ ಒಗ್ಗೂಡಿ ಕ್ಷೇತ್ರ ಜೀರ್ಣೋದ್ಧಾರ ಮಾಡಿದ್ದೇವೆ. ಸುಮಾರು 60 ಲಕ್ಷ ಹಣ ದಾನಿಗಳಿಂದ ಪಡೆದು 1996 ರಿಂದ ದೇವಾಲಯ ಜೀರ್ಣೋದ್ಧಾರ ಮಾಡಿದ್ದೇವೆ. ಆಗ ದೇವಾಲಯ ರಸ್ತೆಗೆ ತೊಂದರೆ ಇಲ್ಲ ಅಂತ ತಹಶಿಲ್ದಾರ್ ವರದಿ ಕೊಟ್ಟಿದ್ದರು.
ಸೆಪ್ಟೆಂಬರ್ 1 ರಂದು ನಾವು ಕೊಂಡೋತ್ಸವ ಮಾಡಿದ್ದೇವು. ಆದ್ರೆ ಸೆಪ್ಟೆಂಬರ್ 8 ರಂದು ಅಧಿಕಾರಿಗಳು ಯಾವುದೇ ಮಾಹಿತಿ ಕೊಡದೆ ದೇವಾಲಯ ಹೊಡೆದಿದ್ದಾರೆ. ನಾವು ಅಲ್ಲಿ ಅಲ್ಪಸಂಖ್ಯಾತರಾಗಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡದಾದವು. ಆದರೆ ಈಗ ಅಲ್ಲಿರುವ ವೀರಗಲ್ಲುಗಳು 2 ಸಾವಿರ ವರ್ಷಗಳ ಇತಿಹಾಸ ಹೇಳುತ್ತಿವೆ ಎಂದು ನರಸಿಂಹೇಗೌಡ ಹೇಳಿದರು.
Key words: place – 800 year –history-temple -hit –mysore-protest