ಮೈಸೂರು ಏಪ್ರಿಲ್ 5,2021(www.justkannada.in): ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಏಪ್ರಿಲ್ 5 ರಿಂದ ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತಿದೆ. ಪ್ಯಾಕ್ ಮಾಡಿದ ನೀರಿನ ಪ್ಲಾಸ್ಟಿಕ್ ಬಾಟಲ್ ಬಳಕೆಯೂ ನಿಲ್ಲಬೇಕು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಸೋಮವಾರ ಜಿಲ್ಲಾ ಪಂಚಾಯತಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವ ಎಸ್.ಟಿ ಸೋಮಶೇಖರ್ ಪ್ಲಾಸ್ಟಿಕ್ ಕವರ್ ಗಳಿಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್ ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಊಟಿಯಲ್ಲಿ ಪ್ಯಾಕ್ ಮಾಡಿದ ನೀರು ಗಾಜಿನ ಬಾಟಲಿನಲ್ಲಿ ಸಿಗುತ್ತದೆ. ಮೈಸೂರಿನಲ್ಲೂ ಅಂತಹ ಪದ್ಧತಿ ಬರಬೇಕು ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
Key words: plastic bottle – water –ban- Ooty- system-mysore- Minister -ST Somashekhar.