ಪ್ಲಾಸ್ಟಿಕ್ ಮುಕ್ತ ಅಭಿಯಾನ: ಪ್ರತಿ ಮನೆ ಮನೆಗೆ ಉಚಿತ ಬಟ್ಟೆ ಬ್ಯಾಗ್ ವಿತರಣೆ

ಮೈಸೂರು,ಜುಲೈ,6,2024 (www.justkannada.in): ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷ ಕ್ಕೂ ಹೆಚ್ಚು ಮನೆಗಳಿದ್ದು ಕಡ್ಡಾಯವಾಗಿ ಎಲ್ಲಾ ಮನೆಯವರು ಪ್ಲಾಸ್ಟಿಕ್ ಮುಕ್ತ ಮಾಡಲು ಸಹಕಾರ ನೀಡಲು ಪ್ರತಿ ಮನೆ ಗಳಿಗೆ ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸಮಾಜಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಶಾಸಕ ಟಿ.ಎಸ್.ಶ್ರೀ ವತ್ಸ ನೇತೃತ್ವದಲ್ಲಿ ಕ್ಷೇತ್ರದ ಪ್ರತಿ ಮನೆಗಳಿಗೂ ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ವಿತರಿಸಿ ಸಾರ್ವಜನಿಕರಿಗೆ ಮನವಿಮಾಡಿ ಅಭಿಯಾನಕ್ಕೆ ಸಹಕಾರ ಕೋರಲಾಯಿತು. ಇಂದು ವಲಯ ಮೂರರ ವ್ಯಾಪ್ತಿಯ ಕುವೆಂಪು ನಗರದ ಭಾಗದಲ್ಲಿ ವಿತರಿಸಲಾಯಿತು ಎಂದು ಟಿ.ಎಸ್.ಶ್ರೀ ವತ್ಸ ತಿಳಿಸಿದರು.

ಈ ಸಂದರ್ಭದಲ್ಲಿ ವಲಯ ಆಯುಕ್ತ ಸತ್ಯಮೂರ್ತಿ, ಪರಿಸರ ವಲಯ ಅಧಿಕಾರಿ ಅರ್ಪಿತಾ, ಇಂಜಿನಿಯರ್ ಮಣಿ, ಮಾಜಿ ನಗರಪಾಲಿಕೆ ಸದಸ್ಯ ರಮೇಶ್, ಜೋಗಿ ಮಂಜು, ಮನೋಜ್, ನಾಗೇಂದ್ರ, ರಾಜೇಶ್, ಹೇಮಂತ, ಪ್ರಸಾದ್, ರವಿ, ಛಾಯ, ಪ್ರದೀಪ್, ಕಿಶೋರ್, ಅಪ್ತ ಸಹಾಯಕ ಆದಿತ್ಯ, ಗೋವಿಂದ,ವಸಂತ,ಮುಂತಾದವರು ಇದ್ದರು.

Key words: Plastic free, campaign: Distribution, cloth bag, mysore