ಮೈಸೂರು,ಫೆಬ್ರವರಿ,10,2021(www.justkannada.in) : ಪ್ಲಾಸ್ಟಿಕ್ ಗೆ 500 ರಿಂದ ಸಾವಿರ ವರ್ಷಗಳ ಆಯಸ್ಸು ಇದೆ. ನ್ಯೂಕ್ಲಿಯರ್ ಗಿಂತಲೂ ಅಪಾಯಕಾರಿ. ಬ್ಯಾನ್ ಮಾಡುವಂತದ್ದಲ್ಲ. ಆದರೆ, ಮನೆಯಿಂದಲೆ ಇದರ ಬಳಕೆ ಕಡಿಮೆ ಮಾಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಸ್ವಚ್ಛ ಸರ್ವೇಕ್ಷಣೆ 2021 ಹಿನ್ನೆಲೆ ನಗರದ ಚಿಕ್ಕ ಗಡಿಯಾರ ಬಳಿ ಹಮ್ಮಿಕೊಂಡಿದ್ದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯ ವಸ್ತುಗಳ ಬಳಕೆಯ ಬಗ್ಗೆ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಏನೆ ಕಾನೂನು, ಕಾರ್ಯಕ್ರಮ ಮಾಡಿದರೂ, ಜನರ ಭಾಗವಹಿಸದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಪ್ಲಾಸ್ಟಿಕ್ ಬ್ಯಾನ್ ಮಾಡಿದರೂ, ಜನ ಅದನ್ನ ಅರ್ಥ ಮಾಡಿಕೊಂಡು ಅದನ್ನ ಪಾಲಿಸಬೇಕು. ಬಟ್ಟೆ ಬ್ಯಾಗ ಬಳಸುವ ಅಭ್ಯಾಸ ಮಾಡಬೇಕು. 50 ಮೈಕ್ರಾನ್ ಗಿಂತ ಕಡಿಮೆ ಪ್ಲಾಸ್ಟಿಕ್ ಮಾತ್ರ ಬ್ಯಾನ್ ಮಾಡಲಾಗಿದೆ. ಆದಷ್ಟು ನೀವು ಫ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಸಲಹೆ ನೀಡಿದರು.
ಸ್ವಚ್ಚ ಸರ್ವೇಕ್ಷಣೆಯಲ್ಲಿ ಎಲ್ಲರೂ ಭಾಗಿಯಾಗಿ
ಮೈಸೂರಿಗರು ಇತರ ನಗರಗಳಿಗೆ ಮಾದರಿಯಾಗಿದ್ದೀರಿ. ಸ್ವಚ್ಚತೆಯಲ್ಲೂ ಹೀಗೆ ಮುಂದೆಯೂ ಮಾದರಿಯಾಗಿರಬೇಕು. ಸ್ವಚ್ಚ ಸರ್ವೇಕ್ಷಣೆಯಲ್ಲಿ ಎಲ್ಲರೂ ಭಾಗಿಯಾಗಿ. 2೦14 ರಲ್ಲಿ ಮೈಸೂರು ನಂ ಒನ್ ಸ್ಥಾನ ಬಂದಿತ್ತು. ಪ್ರತಿ ಸರ್ವೆಯಲ್ಲೂ ಹತ್ತರೊಳಗೆ ಸ್ಥಾನ ಪಡೆದಿದೆ. ಮಾರ್ಚ್ ವರೆಗೂ ಭಾಗವಹಿಸುವೆಕೆಗೆ ಅವಕಾಶವಿದೆ. ಮೈಸೂರಿನ ಸ್ವಚ್ಚತೆ ಬಗ್ಗೆ ಉತ್ತಮ ರೇಟಿಂಗ್ ಕೊಡಿ ಎಂದರು.
ಸ್ಚಚ್ಚನಗರಿ ಪಟ್ಟ ಉಳಿಸಿಕೊಳ್ಳಬೇಕು
ನೀವು ಸ್ವ ಇಚ್ಚೆಯಿಂದ ಭಾಗಿಯಾಗಿ. ಜನರು ಹೆಚ್ಚು ಓಟ್ ಮಾಡಿದ್ರೆ ನಾವು ನಂ ಒನ್ ಸ್ಥಾನ ಪಡೆಯಬಹುದು. ಮೈಸೂರಿಗೆ ಸ್ಚಚ್ಚನಗರಿ ಅನ್ನೊ ಪಟ್ಟ ಇದೆ ಅದನ್ನು ಉಳಿಸಿಕೊಳ್ಳಬೇಕು. ಆ್ಯಪ್ ಅನ್ನು ಬಳಕೆ ಮಾಡಿಕೊಂಡು ಹೆಚ್ವು ವೋಟ್ ಮಾಡಿ ಎಂದು ತಿಳಿಸಿದರು.
“ನಮ್ಮೂರು ಅಂತ ಯೋಚನೆ ಮಾಡಿದ್ರೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡಲ್ಲ”
ಎಂದು ಸ್ವಚ್ಛತಾ ರಾಯಭಾರಿ ಪ್ರೊ.ಕೃಷ್ಣೇಗೌಡ ಅವರು ಮಾತನಾಡಿ, ನಮ್ಮೂರು ಅಂತ ಯೋಚನೆ ಮಾಡಿದ್ರೆ ಸಾಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡಲ್ಲ. ಕಸ ಬಿಸಾಡದಂತೆ ಸಂಕೋಚ ಬಿಟ್ಟು ಹೇಳಿದರೆ ಅನುಕೂಲ ಆಗಲಿದೆ. ಪ್ಲಾಸ್ಟಿಕ್ ನಿಂದ ಏನೆಲ್ಲ ಮಾಡಬಹುದು ಎಂಬುದಾಗಿ ತಿಳಿದುಕೊಳ್ಳಬೇಕಿದೆ ಎಂದರು.
ಮೈಸೂರು ಪ್ರಪಂಚದಲ್ಲಿ ಅತ್ಯಂತ ಸುಂದರ ನಗರ
ಮೈಸೂರಿನ ಜನತೆಗೆ ಕಾಳಜಿ ಪ್ರೀತಿಯಿದೆ. ಅದಕ್ಕೆ, ಮೈಸೂರನ್ನು ನಮ್ಮೂರು ಅಂತಾರೆ. ಯದುವಂಶದ ರಾಜರಿಗೆ ನಾವು ಅಭಿನಂದನೆ ಸಲ್ಲಿಸಬೇಕು. ಬಹಳ ಸುಂದರವಾಗಿ ಮೈಸೂರನ್ನು ಕಟ್ಟಿದ್ದಾರೆ. ಮೈಸೂರು ಪ್ರಪಂಚದಲ್ಲಿ ಅತ್ಯಂತ ಸುಂದರ ನಗರ ಎಂದು ಹೇಳಿದರು.
ನಾವು ಎಲ್ಲದಕ್ಕೂ ಲೋಹಗಳ ಬಳಸುತ್ತೆವೆ. ಪ್ಲಾಸ್ಟಿಕ್ ಡಿಸ್ಪೋಸಲ್ ಹೇಗೆ ಅನ್ನೊದೆ ಚಿಂತೆಯಾಗಿದೆ. ಯಾವುದೇ ಊರಿಗೆ ಹೋದರು ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡೊದರಿಂದ ಸಮಸ್ಯೆಯಾಗಿದೆ. ಇದು ನಮ್ಮೂರು ಅಂತ ಯೋಚನೆ ಮಾಡಿದ್ರೆ ಸಾಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡಲ್ಲ ಎಂದು ಹೇಳಿದರು.
ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಿ ಸೇರಿದಂತೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಭಾಗಿಯಾಗಿದ್ದರು.
key words : Plastic-Nuclear-Dangerous-District-Collector-Rohini Sindhuri