ಮೈಸೂರು, ಏ.14, 2024 : (www.justkannada.in news ) ಹಿಂದೂ ಧರ್ಮವನ್ನು ನಾಶಮಾಡಲು ಕಾಂಗ್ರೆಸ್ ನವರು ಹುನ್ನಾರ ನಡೆಸಿದ್ದಾರೆ. ಆದರೆ ಮೋದಿ ಇರುವವರೆಗೂ ಇದು ಸಾಧ್ಯವಿಲ್ಲ. ಮೋದಿ ಮೇಲೆ ನಿಮ್ಮ ಆರ್ಶೀವಾದ ಇರುವ ತನಕ ಯಾರೇನು ಮಾಡಲಾಗದು. ಇದು ಮೋದಿಯಾ ಗ್ಯಾರಂಟಿ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಆರಂಭದಲ್ಲಿ ಕನ್ನಡದಲ್ಲೇ ಶುಭಕೋರಿ ಮಾತನ್ನಾರಂಭಿಸಿದ ಮೋದಿ ಬಳಿಕ ಸುಮಾರು ಒಂದು ಗಂಟೆಗಳ ಕಾಲ ಭಾಷಾಂತರವಿಲ್ಲದೆ ನಿರ್ಗಳವಾಗಿ ಹಿಂದಿಯಲ್ಲೇ ಭಾಷಣ ಮಾಡಿದರು.
ತ್ರಿ ಪಕ್ಷದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ಭಾಷಣ ಹೀಗಿತ್ತು..
ಹತ್ತು ವರ್ಷಗಳ ಹಿಂದೆ ಭಾರತ ತಂತ್ರಜ್ಞಾನಕ್ಕಾಗಿ ಬೇರೆ ದೇಶಗಳತ್ತ ನೋಡಬೇಕಿತ್ತು. ಇದೀಗ ನಾವು ಚಂದ್ರಯಾನವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಸಾಧಿಸಿದ್ದೇವೆ. ಸ್ಥಳೀಯ ಭಾಷೆಗಳ ಉಳಿವಿಗೆ ಆದ್ಯತೆ ನೀಡಿದ್ದೇವೆ. ಕನ್ನಡ ಭಾಷೆಯನ್ನು ಎಲ್ಲೆಡೆ ಪಸರಿಸುತ್ತೇವೆ.
ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಮಮಂದಿರ ನಿರ್ಮಾಣದ ಮೂಲಕ ಬಿಜೆಪಿ ಸಂಕಲ್ಪ ಈಡೇರಿದೆ. ನಿಮ್ಮ ಪ್ರತಿಯೊಂದು ಮತವೂ ಮೋದಿಯ ಶಕ್ತಿಯನ್ನು ಹೆಚ್ಚಿಸಲಿದೆ. ಈ ಬಾರಿ ಬಿಜೆಪಿ ಜೊತೆಗೆ ಜೆಡಿಎಸ್ ಕೈ ಜೋಡಿಸಿದ್ದು ಮತ್ತಷ್ಟು ಬಲ ಬಂದಿದೆ.
ಸುತ್ತೂರು ಮಠದ ಪರಂಪರೆ, ರಾಷ್ಟ್ರಕವಿ ಕುವೆಂಪು, ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ, ಮೈಸೂರಿನ ಆಳರಸರಾಗಿದ್ದ ನಾಲ್ವಡಿ ಅರಸರ ಕೊಡುಗೆಗಳನ್ನು ಸ್ಮರಿಸಿದ ಮೋದಿ.
ಕಾಂಗ್ರೆಸ್ ನ ಮೈತ್ರಕೂಟ ತುಕಡೇ ತುಕಡೇ ಗ್ಯಾಂಗ್ ಆಗಿದೆ. ದೇಶವನ್ನು ದುರ್ಬಲಗೊಳಸುವುದೇ ಕಾಂಗ್ರೆಸ್ ಅಜೆಂಡಾ ಆಗಿದೆ. ದೇಶ ವಿಭಜನೆಯ ಕುರಿತು ಮಾತನಾಡಿದವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಒಂದೇ ಮಾತರಂ ವಿರೋಧಿಸಿದವರು ಇದೀಗ ಭಾರತ್ ಮಾತಾಕೀ ಜೈ ಎನ್ನುವುದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಕಾಂಗ್ರೆಸ್ ನ ಪತನಕ್ಕೆ ನಾಂದಿಯಾಗಲಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನರೇಂದ್ರ ಮೋದಿ.
ಕಾಂಗ್ರೆಸ್ ನವರು ಸರ್ಜಿಕಲ್ ಸ್ಟ್ರೈಕ್ ಗೂ ಸಾಕ್ಷಿ ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ತುಷ್ಠೀಕರಣ ರಾಜಕೀಯ ಮಾಡುತ್ತಿದೆ. ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಇಲ್ಲಿ ನಡೆಯುವ ದಸರಾ ಮಹೋತ್ಸವ ವಿಶ್ವವಿಖ್ಯಾತ ಆಗಿದೆ. ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ತಿರಸ್ಕರಿಸುವ ಮೂಲಕ ಕಾಂಗ್ರೆಸ್ ನವರು ಅಪಮಾನ ಮಾಡಿದ್ದಾರೆ. ಹಿಂದೂ ಧರ್ಮವನ್ನು ನಾಶಮಾಡಲು ಕಾಂಗ್ರೆಸ್ ನವರು ಹುನ್ನಾರ ನಡೆಸಿದ್ದಾರೆ. ಆದರೆ ಮೋದಿ ಇರುವವರೆಗೂ ಇದು ಸಾಧ್ಯವಿಲ್ಲ. ಇದು ಮೋದಿಕಾ ಗ್ಯಾರಂಟಿ ಆಗಿದೆ ಎಂದು ಗುಡುಗಿದ ಮೋದಿ.
ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಸಂಗ್ರಹಿಸಿರುವ 100 ಕೋಟಿ ಅಕ್ರಮ ಹಣವನ್ನು ದೇಶದ ಇತರೆಡೆಗೆ ಸಾಗಣೆ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ ಪ್ರಧಾನಿ ನರೇಂದ್ರ ಮೋದಿ.
ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ. ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆರೋಪ. ಕರ್ನಾಟಕದ ನೂರಾರು ಕೋಟಿ ಕಪ್ಪು ಹಣ ದೇಶದ ಚುನಾವಣೆಗೆ ಬಳಕೆ ಆಗುತ್ತಿದೆ.
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ವಿಕಾಸ, ಬಡವರ ಕಲ್ಯಾಣ ಕಾರ್ಯಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊಡಲಾಗುತ್ತಿಲ್ಲ. ವಿದ್ಯಾರ್ಥಿಗಳ ಸ್ಕಾಲರ್ಶಿಪ್ ನಿಲ್ಲಿಸಿದ್ದಾರೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಕೊಡುತ್ತಿದ್ದ 4 ಸಾವಿರ ರೂಪಾಯಿ ಸಹಾಯ ಧನ ಬಂದ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಘನಘೋರ ಸಮಸ್ಯೆ ಇದೆ. ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ.
ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಎಚ್.ಡಿ.ಕುಮಾರಸ್ವಾಮಿ, ಯದುವೀರ್, ಬಾಲರಾಜ್ , ಪ್ರಜ್ವಲ್ ರೇವಣ್ಣ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮತ ಹಾಕುವ ಮೂಲಕ ನನ್ನ ಕೈ ಬಲಪಡಿಸುವಂತೆ ಮೋದಿ ಮನವಿ ಮಾಡಿದರು.
ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸುಮಲತಾ ಅಂಬರೀಷ್, ಜಿ.ಟಿ.ದೇವೇಗೌಡ, ಸಾ.ರ.ಮಹೇಶ್, ಎಲ್.ನಾಗೇಂದ್ರ, ಎಸ್. ಎ.ರಾಮದಾಸ್, ಪ್ರತಾಪ್ ಸಿಂಹ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
KEY WORDS : PM Modi, announces, ‘guarantee’, for protection , Hindu religion, Siddaramaiah’s, constituency
ENGLISH SUMMARY :
The Congress is conspiring to destroy Hinduism. But this is not possible as long as Modi is there. As long as you have your blessings on Modi, no one can do anything. This is Modi’s guarantee,” Prime Minister Narendra Modi said.
He was addressing an election rally at maharaja’s college ground in the run-up to the Lok Sabha elections. Modi, who initially began his speech in Kannada, then spoke in Hindi for about an hour without any translation.
The Congress’s Maitrakuta is a tukde tukde gang. The agenda of the Congress is to weaken the country. The Congress has given tickets to those who spoke about the partition of the country. Those who opposed ‘ Onde Mataram’ are now opposing ‘Bharat Mata ki Jai’. This will lead to the downfall of the Congress,” Modi said.