ಮೈಸೂರು,ಸೆಪ್ಟಂಬರ್,17,2020(www.justkannada.in): ಹಸರೀಕರಣಕ್ಕೆ ಎಲ್ಲರು ಸಹಕಾರ ನೀಡುವ ಮೂಲಕ ಪರಿಸರ ಸಮತೋಲನವನ್ನ ಕಾಪಾಡಬೇಕಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನಲೆ. ಮುಡಾ ಆವರಣದಲ್ಲಿ ಗಿಡ ನೆಡುವ ಮೂಲಕ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಆಚರಿಸಿದರು. ಬಳಿಕ ಮಾತನಾಡಿದ ಅವರು, ನರೇಂದ್ರ ಮೋದಿಯವರು ಹಸಿರುಕ್ರಾಂತಿಗೆ ಕರೆ ನೀಡಿದ್ದಾರೆ. ಅವರ ಹುಟ್ಟುಹಬ್ಬದ ದಿನದಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಈಗಾಗಲೇ ಮೈಸೂರಿನಲ್ಲಿ ಲಕ್ಷ ವೃಕ್ಷ ಆಂದೋಲನ ಶುರುವಾಗಿದೆ. ಮುಡಾ ವ್ಯಾಪ್ತಿಗೆ ಬರುವ ಎಲ್ಲಾ ಉದ್ಯಾನವನಗಳಲ್ಲಿ ಗಿಡಗಳನ್ನ ನೆಟ್ಟು ಪೋಷಣೆ ಮಾಡಲಾಗುವುದು ಎಂದರು.
ಮೋದಿಯವರು ಸ್ವಚ್ಛ ಭಾರತ್ ಅಭಿಮಾನಕ್ಕೆ ಕರೆಕೊಟ್ಟಾಗ ದೇಶದ ಜನತೆ ಸಹಕಾರ ನೀಡಿದ್ರು. ಅದೇ ರೀತಿ ಹಸರೀಕರಣಕ್ಕೆ ಎಲ್ಲರು ಸಹಕಾರ ನೀಡಬೇಕು. ಈ ಮೂಲಕ ಪರಿಸರ ಸಮತೋಲನವನ್ನ ಕಾಪಾಡಬೇಕಿದೆ ಎಂದು ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
Key words: pm modi- birthday- Planting – parks-MUDA President -HV Rajeev.