ಬೆಂಗಳೂರು,ಆ,11,2019(www.justkannada.in): ಇಂದೆಂದೂ ಕಂಡಿರಿಯದ ನೆರೆ ಈ ಬಾರಿ ಆಗಿದೆ. ಪ್ರಧಾನಿ ಮೋದಿ ಅವರೇ ಬಂದು ವೈಮಾನಿಕ ಸಮೀಕ್ಷೆ ನಡೆಸಲಿ. ತಕ್ಷಣ ಪರಿಹಾರ ಕಾರ್ಯಕ್ಕೆ 5000ಕೋಟಿ ಬಿಡುಗಡೆ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಆದ ಹೆಚ್ಚು ಮಳೆ ಕಾರಣ 6.5 ಲಕ್ಷ ಕ್ಯೂಸೆಕ್ಸ್ ನೀರು ಬಂದಿದೆ. ಕೇಂದ್ರೆ ಸಚಿವೆ ನಿರ್ಮಾಲ ಸೀತಾರಾಮ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಭೀಕರ ಪ್ರವಾಹ ಅರಿತು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಬೇಕಿತ್ತು. ಇಲ್ಲಿಯವರೆಗೂ ಯಾವುದೇ ತೀರ್ಮಾನ ಆಗಿಲ್ಲ. ಪ್ರಧಾನ ಮಂತ್ರಿಗಳೇ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಂ ಬರುವುದರಿಂದ ಅದಕ್ಕೆ ಗಂಭೀರತೆ ಬರಲ್ಲ. ಅವರಿಗೆ ಜನರ ಕಾಳಜಿ ಇದ್ರೆ ಪಿಎಂ ವೈಮಾನಿಕ ಸಮೀಕ್ಷೆ ಮಾಡ್ಲಿ ಎಂದು ಆಗ್ರಹಿಸಿದರು.
10 ಲಕ್ಷ ಎಕರೆಯಲ್ಲಿ ಬೆಲೆ ನಷ್ಟ, ಜಾನವಾರುಗಳು ಕೊಚ್ಚಿ ಹೋಗಿವೆ. ಆಸ್ತಿ ಪಾಸ್ತಿ ನಷ್ಟವಾಗಿದೆ..ರಸ್ತೆ ಮತ್ತು ರೈಲ್ವೆ ಹಲವು ಕಡೆ ಕೊಚ್ಚಿಕೊಂಡು ಹೋಗಿವೆ. 25-30 ಜನ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಸರ್ಕಾರ ಹೇಳಿದೆ. 2008 ರಲ್ಲೂ ಅತಿವೃಷ್ಠಿ ಆಗಿತ್ತು.. ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ಮಾಡಿ 1600 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ರು. ಸ್ಥಳದಲ್ಲಿಯೇ ಪರಿಹಾರ ಬಿಡುಗಡೆ ಮಾಡಿದ್ರು. ಈಗ ಕೇಂದ್ರ ಕೊಟ್ಟಿರುವುದು ಎನ್ ಡಿ ಆರ್ ಎಫ್ ಅನುದಾನ.. ಅದು ನಮಗೆ ಬರಬೇಕಿದ್ದ ಹಣ. ಇದರಿಂದ ಪ್ರವಾಹ ಪರಿಹಾರ ಮಾಡಕ್ಕೆ ಸಾಧ್ಯವಿಲ್ಲ. ಕೂಡಲೇ ಕೇಂದ್ರ 5000 ಕೋಟಿ ತುರ್ತು ಗಿ ಕೊಡಬೇಕ. ರಾಜ್ಯದಲ್ಲಿ ಏನು ಸಮಸ್ಯೆ ಆಗಿಲ್ಲ ಅನ್ನೋ ರೀತಿ ವರ್ತನೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.
ಬಿಎಸ್ ಯಡಿಯೂರಪ್ಪ ಒನ್ ಮ್ಯಾನ್ ಶೋ…
ಇದೇ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ವಾಗ್ದಾಳಿನಡೆಸಿದ ಸಿದ್ದರಾಮಯ್ಯ, ಸಿಎಂ ಬಿಎಸ್ ವೈ ಏಕಪಾತ್ರಾಭಿನಯ ಮಾಡುತ್ತಿದ್ದಾರೆ. ಅವರು ಒನ್ ಮ್ಯಾನ್ ಶೋ ಆಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ ಪೂರ್ಣಪ್ರಮಾಣದ ಸರ್ಕಾರವಿದ್ದಿದ್ದರೇ ನೆರೆ ಪರಿಸ್ಥಿತಿ ನಿಭಾಯಿಸಬಹುದಿತ್ತು. ಪಾಪ ಬಿಎಸ್ ಯಡಿಯೂರಪ್ಪ ಒಬ್ಬರೇ ಏನು ಮಾಡುತ್ತಾರೆ. ಸರ್ಕಾರ ಬೀಳಿಸಿದಾಗ ಮಾಡುವಾಗ ಇದ್ದ ಅತುರ ಮತ್ತು ಆಸಕ್ತಿ ಈಗ ಇಲ್ಲವಾಗಿದೆ ಎಂದು ಲೇವಡಿ ಮಾಡಿದರು.
ಇನ್ನು ಬಾದಾಮಿಯಲ್ಲಿ 30 ಹಳ್ಳಿಗಳಲ್ಲಿ ತೊಂದರೆ ಆಗಿದೆ. ಒಂದು ಹೆಲಿಕಾಫ್ಟರ್ ಅರೆಂಜ್ ಮಾಡಲು ಇವರಿಗೆ ಆಗಿಲ್ಲ. ಆ ಮೇಲೆ ದೋಣಿ ಮೂಲಕ ಅವರನ್ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದ್ರು. ಗೃಹ ಸಚಿವ ಅಮಿತ್ ಶಾ ಹೆಲಿಕಾಪ್ಟರ್ ಕಳಿಸಿಕೊಡಕ್ಕೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಪರಿಹಾರ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಅನೇಕ ಕಡೆ ಗಂಜಿ ಕೇಂದ್ರ ತೆರೆದಿಲ್ಲ.ಅವರು ಮಲಗಲು ಸ್ಥಳ ಇಲ್ಲ. ಬೆಡ್ ಸೀಟ್ ಕೊಟ್ಟಿಲ್ಲ. ಔಷಧಿ ಸೌಲಭ್ಯ ಮಾಡಿಸಿಕೊಟ್ಟಿಲ್ಲ. ನೆರೆ ನಿಂತ ಬಳಿಕ ಸಾಂಕ್ರಾಮಿಕ ರೋಗಗಳು ಬರುತ್ತೆ ಅದನ್ನ ನಿಭಾಯಿಸಲು ಸರ್ಕಾರ ರೆಡಿ ಇರಬೇಕು. ಅಧಿಕಾರಿಗಳಿಗೆ ಎಚ್ಚರಿಕೆ ಕೊಡಬೇಕು ಎಂದು ಸಲಹೆ ನೀಡಿದರು.
ಪ್ರಹ್ಲಾದ್ ಜೋಷಿ ಯಾವುದೇ ರಿಪೋರ್ಟ್ ಬಂದಿಲ್ಲ ಅಂತ ಹೇಳಿದ್ದಾರೆ. ಈಗ ಅದನ್ನ ತೇಪೆ ಹಚ್ಚುವ ಕೆಲಸ ಇವರಿಂದ ನಡೆಯುತ್ತಿದೆ. ರಿಪೋರ್ಟ್ ಗಾಗಿ ಕೇಂದ್ರ ಕೂರುವುದು ಬೇಡ. ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಮಹಾರಾಷ್ಟ್ರ ಕ್ಕೆ ಹೆಚ್ಚು ಅನುದಾನ ಘೋಷಣೆ ಮಾಡಿದ್ದಾರೆ. ರಾಜ್ಯವನ್ನ ಮಲತಾಯಿ ಧೋರಣೆಯಿಂದ ನೋಡುವುದು ಬೇಡ. ಪರಿಹಾರ ಕೊಡಿ ಅಂತ ಕೇಳಲು ಬಂದವರ ಮೇಲೆ ಲಾಠಿ ಚಾರ್ಜ್ ಮಾಡಿದವರನ್ನ ಮನುಷ್ಯತ್ವ ಇಲ್ಲದವರು ಅಂತ ತಿಳಿದುಕೊಳ್ಳಬೇಕಾಗುತ್ತೆ. ಮೋದಿ ಅವರ ಮೇಲೆ ಯಡಿಯೂರಪ್ಪ ಒತ್ತಡ ಹಾಕಿ ಕರೆದುಕೊಂಡು ಬರಲಿ. ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯ ಆಗಬೇಕು. 26 ಜನ ಸಂಸದರನ್ನ ಗೆಲ್ಲಿಸಿ ಕಳಿಸಿದ್ದಾರೆ .ಆಧ್ಯತೆ ಮೇರೆಗೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಕ್ಷೇತ್ರಕ್ಕೆ ಹೋಗದಿರುವುದಕ್ಕೆ ಕ್ಲಾರಿಫಿಕೇಷನ್ ಕೊಟ್ಟ ಸಿದ್ದರಾಮಯ್ಯ, ನಾನು ಕ್ಷೇತ್ರಕ್ಕೆ ಹೋಗಿಲ್ಲ ಅಂತ ಸೋಷಿಯಲ್ ಮೀಡಿಯಾ ದಲ್ಲಿ ಮಾತನಾಡುತ್ತಿದ್ದಾರೆ. ವೈದ್ಯರು 15 ದಿನ ಹೊರಗೆ ಹೋಗಬಾರದು ಅಂತ ಹೇಳಿದ್ದಾರೆ.. ಅವರು ಹೋಗಿ ಅಂತ ಹೇಳಿದ ತಕ್ಷಣ ಹೋಗುತ್ತೇನೆ ಎಂದು ಹೇಳಿದರು.
ಸೋನಿಯಾ ಗಾಂಧಿ ಸಂಕಷ್ಟ ಸಮಯದಲ್ಲಿ ಪಕ್ಷದ ಅಧ್ಯಕ್ಷ ರಾಗಿದ್ದಾರೆ. ಇದು ಕಲೆಕ್ಟೀವ್ ನಿರ್ಧಾರ. ಗಾಂಧಿ ಕುಟುಂಬದ ವರೇ ಅಧ್ಯಕ್ಷರಾಗಿ ದ್ದಾರೆ ಅನ್ನೋದು ತಪ್ಪು. ಜಿಡಬ್ಲ್ಯೂಸಿಯಲ್ಲಿ ಅವರ ಪರವಾಗಿ ಹೆಚ್ಚು ಜನ ಆಸಕ್ತಿ ತೋರಿಸಿದ್ರು. ಹೀಗಾಗಿ ಅವರು ಆಗಿದ್ದಾರೆ. ಅಮಿತ್ ಶಾ ಒಂದು ಕಡೆ ಮಿನಿಸ್ಟರ್ ಮತ್ತೊಂದು ಕಡೆ ಅಧ್ಯಕ್ಷ ಆಗಿಲ್ಲವೇ ಎಂದು ಸಿದ್ದರಾಮಯ್ಯ ತಿಳಿಸಿದರು.
ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು ಕ್ಷೇತ್ರಗಳಲ್ಲಿ ಇರಬೇಕು ಅಂತ ಹೇಳಿದ್ದೇನೆ..ಕ್ಷೇತ್ರದ ಜನರ ಜತೆ ಇರಬೇಕು ಅಂತ ಹೇಳಿದ್ದೇನೆ. ಕಾಶ್ಮೀರ ವಿಚಾರದ ಬಗ್ಗೆ ನಾನು ಈಗ ಮಾತನಾಡಲ್ಲ ಮೊದಲು ಅವರು ನೆರೆಗೆ ಸ್ಪಂದಿಸಲಿ ಎಂದರು.
Key words: PM Modi- come – aerial survey-Former CM -Siddaramaiah – BS Yeddyurappa -One Man Show ..