ಸಾಲ ಮಾಡುವುದಕ್ಕೂ ತಾಕತ್ತು ಬೇಕು- ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಆರೋಪಕ್ಕೆ ಶಾಸಕ ಎಲ್ ನಾಗೇಂದ್ರ ತಿರುಗೇಟು.

ಮೈಸೂರು,ಫೆಬ್ರವರಿ,3,2023(www.justkannada.in): ದೇಶದಲ್ಲಿ ಅಧಿಕಾರಕ್ಕೆ ಬಂದ 8 ವರ್ಷಗಳಲ್ಲಿ 120 ಲಕ್ಷ ಕೋಟಿ ಸಾಲ ಮಾಡಿದ್ದೆ ಮೋದಿಯವರ ಸಾಧನೆ ಎಂಬ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಕ್ಕೆ ಶಾಸಕ ಎಲ್ ನಾಗೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಸಾಲ ಮಾಡೋದಕ್ಕೂ ತಾಕತ್ತು ಬೇಕು. ಮೊದಲು ವಿಶ್ವಸಂಸ್ಥೆ ಇವರನ್ನ ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಈಗ ದೇಶಕ್ಕೆ ಮೋದಿ ಅವರಿಂದ ಜಾಗತಿಕ ಗೌರವ ಸಿಗುತ್ತಿದೆ. ಕಾಂಗ್ರೆಸ್ ನವರು ಅಷ್ಟೊಂದು ಒಳ್ಳೆ ಕೆಲಸ ಮಾಡಿದ್ರೆ ಜನ ಯಾಕೆ ಇವರನ್ನ ಮನೆಗೆ ಕಳಿಸಿದ್ರು. ಇವರು ಏನೇ ಮಾಡಿದರೂ ಬಿಜೆಪಿಯ ವಿಜಯ ಯಾತ್ರೆಯನ್ನು ತಡೆಯಲು ಸಾಧ್ಯವಿಲ್ಲ. ಮುಂದಿನ 2023 ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. 2024 ಕ್ಕೆ ಕೇಂದ್ರದಲ್ಲಿ 350 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನದಲ್ಲೂ ಕೂರೋಕೆ ಆಗುತ್ತಿಲ್ಲ. ಅಷ್ಟರ ಮಟ್ಟಿಗೆ ಜನ ಇವರನ್ನು ತಿರಸ್ಕಾರ ಮಾಡಿದ್ದಾರೆ. ಯಾರು ದೇಶ, ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ ಅಂತವರನ್ನ  ಜನ ಆಯ್ಕೆ ಮಾಡುತ್ತಾರೆ ಎಂದು ಟಾಂಗ್ ನೀಡಿದರು.

ನಾನು ನನ್ನ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ ಎಂಬ ವಿಶ್ವಾಸ ಇದೆ. ಬೇಕಾದರೆ ಹಿಂದೆ ಇದ್ದ ಶಾಸಕ ವಾಸು ಬಹಿರಂಗ ಚರ್ಚೆಗೆ ಬರಲಿ ನಾನೇನು ಕೆಲಸ ಮಾಡಿದ್ದೀನಿ. ನೀವೇನು ಅಭಿವೃದ್ಧಿ ಕೆಲಸ ಮಾಡಿದ್ರಿ ಅನ್ನೋದನ್ನ ಚರ್ಚೆ ಮಾಡೋಣ. ನಾನು ನನ್ನ ಕ್ಷೇತ್ರದಲ್ಲಿ ಯಾವುದೇ ತಾರತಮ್ಯ ಇಲ್ಲದೆ ಕ್ಷೇತ್ರದ ಪ್ರತಿಯೊಂದು ಭಾಗಕ್ಕೂ ಸಮನಾದ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದೇನೆ. ಯಾವುದೇ ಜಾತಿ ಧರ್ಮ ಅಂತ ಬೇದ ಭಾವ ನಾನು ಮಾಡಿಲ್ಲ. ನನಗೆ ಕೆಲವು ಕಡೆ ಹೆಚ್ಚು ಮತಗಳ ಬಂದಿವೆ. ಕೆಲವು ಕಡೆ ಬಹಳ ಕಡಿಮೆ ಮತಗಳ ಬಂದಿವೆ. ಆಗಂತ ನಾನು ಒಂದು ಕಡೆ ಕಡಿಮೆ ಮತ್ತೊಂದು ಕಡೆ ಜಾಸ್ತಿ ಅನುದಾನವನ್ನು ಕೊಡುವ ಕೆಲಸ ಮಾಡಿಲ್ಲ. ಎಲ್ಲರಿಗೂ ಸಮಾನವಾಗಿ ಹಂಚುವ ಕೆಲಸ ಮಾಡಿದ್ದೇನೆ. ಹಾಗಾಗಿ ಯಾರು ಉತ್ತಮ ಕೆಲಸ ಮಾಡುತ್ತಾರೆ ಅವರಿಗೆ ಜನ ಆಶೀರ್ವಾದ ಮಾಡುತ್ತಾರೆ. ಕಾಂಗ್ರೆಸ್ ಕನಸು ಕಾಣುತ್ತಿದೆ ಅಷ್ಟೇ ಅದು ಕನಸಾಗೆ ಉಳಿಯುತ್ತದೆ. ಯಾವುದೇ ಕಾರಣಕ್ಕೂ ಬಿಜೆಪಿ ಗೆಲುವನ್ನು ಯಾರೂ ತಡೆಯಲಿಕ್ಕೆ ಆಗುವುದಿಲ್ಲ ಎಂದು ಎಲ್.ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Key words:  PM-Modi- Congress –spokesperson- M. Laxman – MLA- L. Nagendra-mysore