ನವದೆಹಲಿ,ಡಿಸೆಂಬರ್,25,2020(www.justkannada.in): ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮದಿನವಾಗಿದ್ದು ದೇಶಾದ್ಯಂತ ಕಿಸಾನ್ ಸಮ್ಮಾನ್ ದಿನಾಚಾರಣೆ ಮಾಡಲಾಗುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ದೇಶದ ರೈತರೊಂದಿಗೆ ಸಂವಾದ ನಡೆಸುತ್ತಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮನ್ ನಿಧಿ (ಪಿಎಂ-ಕಿಸಾನ್) ಹಣವನ್ನ ರೈತರ ಖಾತೆಗೆ ಬಿಡುಗಡೆ ಮಾಡುವ ಮೂಲಕ ಅನ್ನದಾತರಿಗೆ ಗಿಫ್ಟ್ ನೀಡಿದ್ದಾರೆ. ದೇಶದ 9 ಕೋಟಿ ರೈತರ ಖಾತೆಗೆ ತಲಾ 2 ಸಾವಿರ ರೂ ಹಣ ಜಮೆ ಮಾಡಲಾಗಿದೆ.
9 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 18 ಸಾವಿರ ಕೋಟಿಗೂ ಹೆಚ್ಚು ಕಂತನ್ನು ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ಇದೇ ವೇಳೆ ಆರು ರಾಜ್ಯಗಳ ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸುತ್ತಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಂಬುದು ಅರ್ಹ ರೈತರಿಗೆ ವಾರ್ಷಿಕ 6,000 ರೂಪಾಯಿ ನೆರವನ್ನು ಮೂರು ಸಮಾನ ಕಂತುಗಳಲ್ಲಿ ಪಾವತಿಸುವ ಯೋಜನೆಯಾಗಿದೆ. ಈ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಸರ್ಕಾರ ವರ್ಗಾಯಿಸುತ್ತದೆ.
English summary….
PM gives sweet news to farmers: PM Kisan Samman programme money directly to farmers bank accounts
New Delhi, Dec. 25, 2020 (www.justkannada.in): Today is former Prime Minister Atal Behari Vajpayee’s birth anniversary, which is celebrated as Kisan Samman Day across the country. Prime Minister Narendra Modi participated in a virtual interaction programme with the farmers of the country.
The Prime Minister has gifted the farmers by announcing that the Prime Minister’s Kisan Samman Nidhi (PM-Kisan) will be deposited directly into the bank accounts of the farmers. About 9 crore farmers across the country will receive Rs. 2,000 through this.
The Prime Minister released Rs.18,000 crore grants to more than 9 crore farmers today through video conferencing. He also interacted with the farmers of six states. Sri Narendra Singh Tomar, Agriculture Minister, Govt. of India also participated.
A total sum of Rs.6,000 will be deposited into the accounts of eligible farmers in three annual instalments under the PM Kisan Samman Nidhi programme.
Keywords: Prime Minister Narendra Modi/ Kisan Samman Diwas/ 9 crore farmers/ grants released/ direct deposit.
Key words: PM Modi- conversation- with- farmers- PM Kisan Samman Scheme –Money- Farmers Account …