ನವದೆಹಲಿ,ಅಕ್ಟೋಬರ್,23,2021(www.justkannada.in): ಭಾರತದಲ್ಲಿ 100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ ಪೂರ್ಣಗೊಳಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಸಿಕೆ ಉತ್ಪಾದಕ ಕಂಪನಿಗಳ ಮುಖ್ಯಸ್ಥರ ಜತೆ ಸಂವಾದ ನಡೆಸಿದರು.
ಕೊರೊನಾ ಲಸಿಕೆ ಉತ್ಪಾದಕರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲರ ಸಹಕಾರದಿಂದ ದೇಶದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆಯ ಮೈಲುಗಲ್ಲನ್ನು ಸಾಧಿಸಿದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಭಾರತ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್, ಡಾ. ರೆಡ್ಡಿ ಲ್ಯಾಬೋರೇಟರೀಸ್, ಜೈಡಸ್ ಕ್ಯಾಡಿಲಾ, ಬಯೋಲಾಜಿಕಲ್ ಇ, ಗೆನ್ನೋವಾ ಬಯೋಫಾರ್ಮಾ ಮತ್ತು ಪ್ಯಾನೇಸಿಯ ಬಯೋಟೆಕ್ ಉತ್ಪಾದನಾ ಕಂಪನಿಗಳ ಪ್ರತಿನಿಧಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿ ಚರ್ಚಿಸಿದರು.
ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಉಪಸ್ಥಿತರಿದ್ದರು. ಭಾರತದಲ್ಲಿ ಇನ್ನು ಉಳಿದ ಅರ್ಹ ಮಂದಿಗೆ ಸಾಧ್ಯವಾದಷ್ಟೂ ಬೇಗ ಲಸಿಕೆ ನೀಡುವ ಮಾರ್ಗಗಳ ಬಗ್ಗೆ ಹಾಗೂ ‘ಎಲ್ಲರಿಗೂ ಲಸಿಕೆ’ ಎಂಬ ಅಭಿಯಾನದ ಅಡಿಯಲ್ಲಿ ಇತರ ದೇಶಗಳಿಗೂ ಸಹಾಯ ಮಾಡುವ ಬಗ್ಗೆ ಮೋದಿ ಈ ಸಭೆಯಲ್ಲಿ ಚರ್ಚಿಸಿದ್ದಾರೆ.
Key words: PM Modi- conversation –with-vaccine -manufacturing -companies