ಮೈಸೂರು,ಅಕ್ಟೋಬರ್,6,2020(www.justkannada.in): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಮಾತನಾಡದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಪ್ರಧಾನಿಗೆ ನವಿಲು ಕರೆದು ಆಹಾರ ಹಾಕೋಕೆ ಟೈಂ ಸಿಗುತ್ತೆ, ಟ್ರಂಪ್ ಗೆ ಟ್ವೀಟ್ ಮಾಡಿ ಶುಭಕೋರೊದಕ್ಕೆ ಟೈಂ ಸಿಗುತ್ತೆ. ಅದರೆ ಸಂತ್ರಸ್ತೆ ಪರವಾಗಿ ಟ್ವೀಟ್ ಮಾಡೋಕೆ ಮೋದಿಗೆ ಟೈಂ ಸಿಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಗೆಯೇ ನಾವು ದೆಹಲಿ ನಿರ್ಭಯ ಪ್ರಕರಣದಲ್ಲಿ ಎಷ್ಟೊಂದು ಸಹಾಯ ಮಾಡಿದ್ವಿ. ಆದ್ರೆ ಇವರು ಪೊಲೀಸರನ್ನ ಬಳಸಿಕೊಂಡು ಸಂತ್ರಸ್ಥೆಯನ್ನು ಸೀಮೆಎಣ್ಣೆ ಹಾಕಿ ಬೇಯಿಸಿದ್ರು.ಪೊಲೀಸರನ್ನ ಬಳಸಿಕೊಂಡು ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಮೇಲೆ ಹಲ್ಲೆ ಮಾಡಿಸಿದರು ಎಂದು ಸಿದ್ಧರಾಮಯ್ಯ ಹರಿಹಾಯ್ದರು.
Key words: PM modi –food- No time – tweet – Siddaramaiah-mysore