ಬೆಂಗಳೂರು,ನವೆಂಬರ್,11,2024 (www.justkannada.in): ಕಾಂಗ್ರೆಸ್ ನವರು ಕರ್ನಾಟಕದ ಅಬಕಾರಿ ಇಲಾಖೆಯ ಹಣವನ್ನ ಮಹಾರಾಷ್ಟ್ರ ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮಾಜಿ ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಸುಳ್ಳು ಹೇಳೋದು ಮೋದಿ ಅವರಿಗೆ ಶೋಭೆ ತರಲ್ಲ. ಮೋದಿ ಬಳಿ ದಾಖಲೆ ಇದ್ದರೆ ಮಾತ್ರ ಮಾತನಾಡಲಿ. ಚುನಾವಣೆಗಾಗಿ ಈ ರೀತಿ ಆರೋಪ ಮಾಡ್ತಾರೆಂದು ನಿರೀಕ್ಷೆ ಇರಲಿಲ್ಲ. ರಾಜ್ಯದ ಅಭಿವೃದ್ಧಿಗೆ ಮೋದಿ ಅವರು ಏನು ಯೋಜನೆ ಕೊಟ್ಟಿದಾರೆಂದು ಹೇಳಲಿ ಎಂದು ಸವಾಲು ಹಾಕಿದರು.
ಮೋಧಿ ರಾಜಕೀಯದಿಂದ ಹೇಳಿಕೆ ಕೊಡೋದು ಸರಿಯಲ್ಲ. ತೆರಿಗೆ ಅನ್ಯಾಯದ ಕುರಿತು ಮಾತನಾಡಲ್ಲ. ತೆರಿಗೆ ಅನ್ಯಾಯ, ನೀರಾವರಿ ಅನ್ಯಾಯ, ಮಲತಾಯಿ ಧೋರಣೆ, ಉದ್ಯೋಗ ಸೃಷ್ಠಿಯಲ್ಲಿ ಅನ್ಯಾಯ ಮಾಡಿದ್ದಾರೆ. 4 ಕೋಟಿ ತೆರಿಗೆ ಹಣ ಉತ್ತರ ಭಾರತದ ರಾಜ್ಯಗಳಿಗೆ ಕೊಡುತ್ತಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಕಿಡಿಕಾರಿದರು.
Key words: PM Modi, Money, Maharastra, Election, DK Suresh