ಮೈಸೂರು, ಜೂನ್ 19, 2022 (www.justkannada.in): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೂನ್ 20ರಂದು ಮೈಸೂರು ನಗರಕ್ಕೆ ಭೇಟಿ ನೀಡಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂಬಂಧ ಕೆಳಕಂಡ ಸ್ಥಳಗಳಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಸದರಿ ವಾಹನ ನಿಲುಗಡೆ ಸ್ಥಳಗಳಿಗೆ ಸಂಚರಿಸಲು ಮಾರ್ಗಗಳು ಈ ಕೆಳಕಂಡಂತಿರುತ್ತದೆ.
ಬಸ್ಸುಗಳ ನಿಲುಗಡೆಗೆ ಗುರುತಿಸಲಾಗಿರುವ ಸ್ಥಳಗಳು ಮತ್ತು ಸದರಿ ಸ್ಥಳಗಳಿಗೆ ಸಂಚರಿಸುವ ಮಾರ್ಗಗಳ ವಿವರ ಹೀಗಿದೆ.
ಜೆ.ಕೆ ಮೈದಾನ ಪಾರ್ಕಿಂಗ್ (ಮಂಡ್ಯ ಕಡೆಯಿಂದ ಬರುವ ಬಸ್ಸುಗಳು):-
ಮೈಸೂರು ಬೆಂಗಳೂರು ರಸ್ತೆ- ನಾಡಪ್ರಭು ಕೆಂಪೇಗೌಡ ವೃತ್ತ- ಲಿಂಕ್ ರಸ್ತೆ ಜಂಕ್ಷನ್- ಟಿ.ಎನ್
ನರಸಿಂಹಮೂರ್ತಿ ವೃತ್ತ- ಅಬ್ದುಲ್ ಕಲಂ ಅಜಾದ್ ವೃತ್ತ- ಸುಭಾಷ್ ಚಂದ್ರ ಬೋಸ್ ವೃತ್ತ- ಪುಟ್ಟ
ಗೋಪಾಲ ಕೃಷ್ಣ ಶೆಟ್ಟಿ ವೃತ್ತ- ಜೆ.ಕೆ ಮೈದಾನ ಪಾರ್ಕಿಂಗ್.
(ಮಂಡ್ಯ ಕಡೆಯಿಂದ ಒಟ್ಟು-233 ಬಸ್ಸುಗಳು)
ವಿಲೇಜ್ ಹಾಸ್ಟೆಲ್ ಮೈದಾನ ಪಾರ್ಕಿಂಗ್ (ಹಾಸನ & ಹುಣಸೂರು ಕಡೆಯಿಂದ ಬರುವ ಬಸ್ಸುಗಳು) :-
ಮೈಸೂರು ಹುಣಸೂರು ರಸ್ತೆ- ಹೂಟಗಳ್ಳಿ ಜಂಕ್ಷನ್- ಹಿನಕಲ್ ಜಂಕ್ಷನ್- ವೈ.ಎನ್.ಎಸ್ ಜಂಕ್ಷನ್‌ವೆಂಕಟರಮಣಯ್ಯ ರಸ್ತೆ- ಬಲತಿರುವು- ಬಯಲು ರಂಗ ಮಂದಿರ ರಸ್ತೆ- ತಿಪ್ಪೇಸ್ವಾಮಿ ವೃತ್ತ- ವಿಲೇಜ್
ಹಾಸ್ಟೆಲ್ ಮೈದಾನ ಪಾರ್ಕಿಂಗ್.
( ಹುಣಸೂರು ಕಡೆಯಿಂದ-41 ಬಸ್ಸುಗಳು)
ಮೈಸೂರು ವಿಶ್ವವಿದ್ಯಾನಿಲಯ ಪಾರ್ಕಿಂಗ್ (ಪಿರಿಯಾಪಟ್ಟಣ, ಕೆ.ಆರ್ ನಗರ ಕಡೆಯಿಂದ ಬರುವ ಬಸ್ಸುಗಳು):-
ಪಿರಿಯಾಪಟ್ಟಣ ಕಡೆಯಿಂದ ಬರುವ ಬಸ್ಸುಗಳು : ಮೈಸೂರು ಹುಣಸೂರು ರಸ್ತೆ- ಹೂಟಗಳ್ಳಿ ಜಂಕ್ಷನ್-
ಹಿನಕಲ್ ಜಂಕ್ಷನ್- ವೈ.ಎನ್.ಎಸ್ ಜಂಕ್ಷನ್- ಚದುರಂಗ ಜಂಕ್ಷನ್- ಜೆ.ಸಿ ಕಾಲೇಜು ರಸ್ತೆ- ಮೈಸೂರು
ವಿಶ್ವವಿದ್ಯಾನಿಲಯ ಪಾರ್ಕಿಂಗ್.
ಕೆ.ಆರ್ ನಗರ ಕಡೆಯಿಂದ ಬರುವ ಬಸ್ಸುಗಳು : ಮೈಸೂರು ಹುಣಸೂರು ರಸ್ತೆ- ಹೂಟಗಳ್ಳಿ ಜಂಕ್ಷನ್-
ಹಿನಕಲ್ ಜಂಕ್ಷನ್- ವೈ.ಎನ್.ಎಸ್ ಜಂಕ್ಷನ್- ವೆಂಕಟರಮಣಯ್ಯ ರಸ್ತೆ- ಬಲತಿರುವು- ಬಯಲು ರಂಗ
ಮಂದಿರ ರಸ್ತೆ- ಮೈಸೂರು ವಿ.ವಿ ಸೆನೆಟ್ ಭವನ ಗೇಟ್ ಮೂಲಕ ಮೈಸೂರು ವಿಶ್ವವಿದ್ಯಾನಿಲಯ ಪಾರ್ಕಿಂಗ್.
(ಪಿರಿಯಾಪಟ್ಟಣ ಕಡೆಯಿಂದ -39 ಬಸ್ಸುಗಳು & ಕೆ.ಆರ್.ನಗರ ಕಡೆಯಿಂದ-41 ಬಸ್ಸುಗಳು ಒಟ್ಟು 80
ಬಸ್ಸುಗಳು)
ಎನ್.ಎಸ್.ಎಸ್ ಕಛೇರಿ ಮೈದಾನ ಮತ್ತು ಸೋಮಾನಿ ಬಿ.ಎಡ್ ಕಾಲೇಜು ಮೈದಾನ ಪಾರ್ಕಿಂಗ್ (ನಂಜನಗೂಡು, ಚಾಮರಾಜನಗರ ಕಡೆಯಿಂದ ಬರುವ ಬಸ್ಸುಗಳು)
ಮೈಸೂರು ನಂಜನಗೂಡು ರಸ್ತೆ- ಡಾ. ಎ.ಪಿ.ಜೆ ಅಬ್ದುಲ್ ಕಲಂ ವೃತ್ತ- ಎಡತಿರುವು- ರಿಂಗ್ ರಸ್ತೆ
ಮೂಲಕ- ಕೆ.ಇ.ಬಿ ಜಂಕ್ಷನ್- ಬೋಗಾದಿ ರಿಂಗ್ ರಸ್ತೆ ಜಂಕ್ಷನ್- ಬಲತಿರುವು- ಬೋಗಾದಿ ರಸ್ತೆ-
ಶಂಕರ್‌ನಾಗ್ ವೃತ್ತ- ಬಲತಿರುವು- ಬಿಸಿಲು ದೇವಸ್ಥಾನ ರಸ್ತೆ- ಸಾಹುಕಾರ್ ಚೆನ್ನಯ್ಯ ರಸ್ತೆ- ಎನ್.ಎಸ್.ಎಸ್
ಕಛೇರಿ ಮೈದಾನ ಮತ್ತು ಸೋಮಾನಿ ಬಿ.ಎಡ್ ಕಾಲೇಜು ಮೈದಾನ ಪಾರ್ಕಿಂಗ್.
(ನಂಜನಗೂಡು ಕಡೆಯಿಂದ -90 ಬಸ್ಸುಗಳು & ಚಾಮರಾಜನಗರ ಕಡೆಯಿಂದ-130 ಬಸ್ಸುಗಳು ಒಟ್ಟು 220
ಬಸ್ಸುಗಳು)
ಮಹಾಬೋದಿ ಹಾಸ್ಟೆಲ್ ಮೈದಾನ ಪಾರ್ಕಿಂಗ್ (ಹೆಚ್.ಡಿ ಕೋಟೆ ಕಡೆಯಿಂದ ಬರುವ ಬಸ್ಸುಗಳ ):-
ಮಾನಂದವಾಡಿ ರಸ್ತೆ- ಶ್ರೀರಾಂಪುರ ಜಂಕ್ಷನ್- ಎಡತಿರುವು- ರಿಂಗ್ ರಸ್ತೆ ಮೂಲಕ- ಬೋಗಾದಿ ರಿಂಗ್
ರಸ್ತೆ ಜಂಕ್ಷನ್- ಬಲತಿರುವು- ವಿ.ಎಂ.ಡಿ ಜಂಕ್ಷನ್- ಮಹಾಬೋದಿ ಹಾಸ್ಟೆಲ್ ಮೈದಾನ ಪಾರ್ಕಿಂಗ್.
(ಹೆಚ್.ಡಿ.ಕೋಟೆ ಕಡೆಯಿಂದ ಒಟ್ಟು-39 ಬಸ್ಸುಗಳು)
ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಪಾರ್ಕಿಂಗ್ (ಟಿ.ಎನ್ ಪುರ ಕಡೆಯಿಂದ ಬರುವ ಬಸ್ಸುಗಳು & ಸ್ಥಳೀಯ ಬಸ್ಸುಗಳು):
ಟಿ.ಎನ್ ಪುರ ರಸ್ತೆ- ರಿಂಗ್ ರಸ್ತೆ ಮೂಲಕ- ನಾಡಪ್ರಭು ಕೆಂಪೇಗೌಡ ವೃತ್ತ- ಲಿಂಕ್ ರಸ್ತೆ ಜಂಕ್ಷನ್‌ಟಿ.ಎನ್ ನರಸಿಂಹಮೂರ್ತಿ ವೃತ್ತ- ಅಬ್ದುಲ್ ಕಲಂ ಅಜಾದ್ ವೃತ್ತ- ಸುಭಾಷ್ ಚಂದ್ರ ಬೋಸ್ ವೃತ್ತ-
ಪುಟ್ಟಗೋಪಾಲ ಕೃಷ್ಣ ಶೆಟ್ಟಿ ವೃತ್ತ- ದಾಸಪ್ಪ ವೃತ್ತ- ಮೆಟ್ರೋಪೋಲ್ ಜಂಕ್ಷನ್- ಹುಣಸೂರು ರಸ್ತೆ- ಡಿ.ಸಿ
ಕಛೇರಿ ಆರ್ಚ್ ಗೇಟ್ ಜಂಕ್ಷನ್- ಎಡತಿರುವು- ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ಪಾರ್ಕಿಂಗ್.
(ಟಿ.ನರಸೀಪುರ ಕಡೆಯಿಂದ-72 ಬಸ್ಸುಗಳು & ಸ್ಥಳೀಯ ಬಸ್ಸುಗಳು-54 ಒಟ್ಟು-126 ಬಸ್ಸುಗಳು)
ದ್ವಿಚಕ್ರ & ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಗುರುತಿಸಲಾಗಿರುವ ಸ್ಥಳಗಳು
- ಯುವರಾಜ ಕಾಲೇಜು ಮೈದಾನ
- ಮಹಾರಾಜ ಜೂನಿಯರ್ ಕಾಲೇಜು ಮೈದಾನ
- ಮಹಾರಾಣಿ ಕಾಲೇಜು ಮೈದಾನ
- ಅರಸು ಬೋರ್ಡಿಂಗ್ ಶಾಲೆ ಮೈದಾನ
- ಅಗ್ನಿಶಾಮಕ ಠಾಣೆ ಮೈದಾನ.
- ಮಹಾಬೋದಿ ಹಾಸ್ಟೆಲ್ ಮೈದಾನ
- ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ