8 ಚೀತಾಗಳನ್ನ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ.

ಮಧ್ಯಪ್ರದೇಶ,ಸೆಪ್ಟಂಬರ್,17,2022(www.justkannada.in):  ಆಫ್ರಿಕಾದ ನಮೀಬಿಯಾದಿಂದ ತರಲಾದ ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಚೀತಾಗಳು ಮತ್ತೆ ಮರಳಿವೆ.   ಭಾರತದಲ್ಲಿ ಕೆಲವು ವಿಶಿಷ್ಠ ಪ್ರಾಣಿಗಳ ಸಂತತಿ ನಶಿಸುತ್ತಿದೆ. ಅಂತಹ ಸಂತತಿಯನ್ನ ರಕ್ಷಣೆ ಮಾಡಬೇಕಿದೆ.  ಈ ವೇಳೆ ನಮೀಬಿಯಾ ಸರ್ಕಾರಕಕ್ಕೆ ಧನ್ಯವಾದ ಅರ್ಪಿಸುತ್ತೇನೆ.   ಅಜಾದಿ ಕಾ ಅಮೃತ್ ಮಹೋತ್ಸವದ ಜೊತೆಗೆ  ಇಂದು ಭಾರತಕ್ಕೆ ಮತ್ತೊಂದು ಹೆಮ್ಮೆಯ ದಿನವಾಗಿದೆ ಎಂದು ನುಡಿದರು.

70 ವರ್ಷಗಳ ಹಿಂದೆ ದೇಶದಲ್ಲಿ ಚೀತಾಗಳಿದ್ದವು ಬೇಟೆಗಾರರಿಂದಾಗಿ ದೇಶದಲ್ಲಿ ಚೀತಾಗಳ  ಸಂತತಿ ನಾಶವಾಗಿದೆ.  ನನಗೆ ಇಂದು ಬಗಳ ಸಂತೋಷವಾಗಿದೆ.  ಪ್ರಕೃತಿ  ಪರಿಸರ ಸಂರಕ್ಷಣೆಯಿಂದ ಜೀವಿ ಸಂರಕ್ಷಣೆಯಾಗಲಿದೆ.   ದಶಕಗಳ ನಂತರಚೀತಾಗಳು ನಮ್ಮ ನೆಲಕ್ಕೆ ಬಂದಿವೆ.  ಇದು ನಮ್ಮ ದೇಶದ ಹೆಮ್ಮೆಯ ದಿನ. ಈ ವೇಳೆ ಎಲ್ಲಾ ಭಾರತೀಯರನ್ನ ಅಭಿನಂದಿಸುತ್ತೇನೆ ಎಂದರು.

Key words: PM Modi-released -8 cheetahs – Kuno National Park.