ಮೈಸೂರು,ಸೆಪ್ಟಂಬರ್, 17,2020(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟು ಹಬ್ಬ ಹಿನ್ನೆಲೆ ಇಂದು ಮೈಸೂರಿನಲ್ಲಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಪ್ರಾಚೀನ ಕಾಲದ ಬಸವನ ದೇವಾಲಯ ಮರು ನಿರ್ಮಾಣ ಮತ್ತು ಸ್ವಚ್ಛತಾ ಕಾರ್ಯ ನೆರವೇರಿತು.
ಮೈಸೂರು ಬೆಂಗಳೂರು ರಸ್ತೆಯ ಎಡಭಾಗದಲ್ಲಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಪಕ್ಕ ಇರುವ ಕಾಡು ಬಸವ ದೇವಸ್ಥಾನವು ಸುಮಾರು 1849 ಕಾಲದಲ್ಲಿ ಪ್ರತಿಷ್ಠಿತ ದೇವಸ್ಥಾನವಾಗಿದ್ದು ಇದು ಪಾಳು ಬಿದ್ದಿದೆ. ಆ ಸ್ಥಳದಲ್ಲಿ ರಾಜ ಮಹಾರಾಜ ಕಾಲದ ವೀರಗಲ್ಲುಗಳು ಇದ್ದು ಇಲ್ಲಿ ಬಸವೇಶ್ವರ ನ ಮೂಲ ವಿಗ್ರಹವನ್ನು ಮೈಸೂರು ಸಂಸ್ಥಾನದ ರಾಜರ ಆಳ್ವಿಕೆಯ ಕಾಲದ ರಾಜ ಮನೆತನದವರು ಪ್ರತಿಪ್ಠಾಪಿಸಿದ್ದರು. ಇದರ ಸುತ್ತ ಮುತ್ತ ಗಿಡ ಗಂಟೆಗಳು ಬೆಳೆದಿದ್ದು ಇಂದು ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಗಿಡ ಗಂಟೆಗಳು ಕಿತ್ತು ಸ್ವಚ್ಛಮಾಡಿ ಸುತ್ತಲೂ ಸುಣ್ಣವನ್ನು ಬಳಿದು ಶುಚಿ ಗೊಳಿಸಲಾಯಿತು.
ನಂತರ ನಗರ ಅಧ್ಯಕ್ಷರಾದ ಟಿ.ಎಸ್ ಶ್ರೀ ವತ್ಸ ಮಾತನಾಡಿ ನಗರ ಭಾಜಪ ಘಟಕದ ವತಿಯಿಂದ ನಗರದ 65 ವಾರ್ಡ್ ಗಳಲ್ಲು ಒಂದಲ್ಲ ಒಂದು ರೀತಿಯ ಚಟುವಟಿಕೆಗಳು ನಡೆಯುತ್ತಿದೆ. ಮುಂದಿನ ವರ್ಷಗಳ ಕಾಲ ನಿರಂತರವಾಗಿ ಸೇವಾ ಸಪ್ತಾಹ ನ ಅಡಿಯಲ್ಲಿ ರೈತ ಮೊರ್ಚಾದವರು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ, ಗೋವು ಉಳಿವಿಗಾಗಿ ಗೋ ಪೂಜೆ ಮತ್ತು ಅದಕ್ಕೆ ಮೇವು ವಿತರಿಸಲಾಗುತ್ತದೆ. ಹಿಂದುಳಿದ ವರ್ಗಗಳ ಮೊರ್ಚಾ,ಎಸ್,ಟಿ,ಮೊರ್ಚಾ,ಮಹಿಳಾ ಮೊರ್ಚಾ,ಎಸ್.ಸಿ ಮೊರ್ಚಾ,ಅಲ್ಪ ಸಂಖ್ಯಾಂತರ ಮೊರ್ಚಾ ದವರು ” ಸ್ವಚ್ಛ ಭಾರತ್ ಶೇಷ್ಟ ಭಾರತ್” ನ ಅಡಿಯಲ್ಲಿ ಮೈಸೂರು ನಗರದಲ್ಲಿ ಒಂದಲ್ಲ ಒಂದು ರೀತಿ ಸ್ವಚ್ಚತಾ ಕಾರ್ಯವನ್ನು ಪ್ರಾರಂಭಿಸಿದ್ದು, ಯುವ ಮೊರ್ಚಾದ ತಂಡವು ರಕ್ತದಾನ ಮಾಡುವ ನಿಟ್ಟಿನಲ್ಲಿ ನೂರಾರು ಯುವಕರು ಕಾರ್ಯ ಪ್ರವೃತ್ತರಾಗಿದ್ದಾರೆ. ಭಾ.ಜ.ಪ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸಲಾಗುತ್ತಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ರವರು ಮಾತನಾಡಿ ನೆಚ್ಚಿನ ಪ್ರಧಾನಿ ಯವರ ಹುಟ್ಟುಹಬ್ಬದ ಅಂಗವಾಗಿ ಅವರ ನೂರಾರು ಯೋಜನೆ ಗಳನ್ನು ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಬರುವ 188 ಜಾತಿಯ ಎಲ್ಲಾ ವರ್ಗದವರು ಸವಲತ್ತುಗಳನ್ನು ಪಡೆದುಕೊಳ್ಳಬೇಕು ಹಾಗೇಯೆ ರಾಜ್ಯದ ಪ್ರತಿ ಮನೆ ಮನೆಗೂ ಮೋದಿ ಯವರ ಯೋಜನೆಗಳನ್ನು ತಲುಪಿಸಬೇಕು ತಿಂಗಳಿಗೆ ಒಂದು ಗ್ರಾಮದಂತೆ ಅಲ್ಲಿಯ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡಬೇಕು,ಗ್ರಾಮ ವಿಕಾಸ್ ಯೋಜನೆ ಸಮರ್ಪಕವಾಗಿ ತಲುಪವ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗಬೇಕೆಂದು ಮನವಿ ಮಾಡಿದರು.
ನಂತರ ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿಮಂಜು ಮಾತನಾಡಿ, ನರೇಂದ್ರ ಮೋದಿ ಯವರು ಹಿಂದುಳಿದ ವರ್ಗದವರಾಗಿದ್ದು ಅವರ ಕಲ್ಪನೆಯಂತೆ ಸ್ವಚ್ಛ ಬಾರತ್ ಶ್ರೇಷ್ಠ ಭಾರತ್ ,ಗ್ರಾಮ ವಿಕಾಸ್, ಅಯುಷ್ಮಾನ್ ಭಾರತ್, ಪ್ರಾಚೀನ ಕಾಲದ ಪಳೆಯುಳಿಕೆಗಳ ಉಳುವಿಕೆಯ ಯೋಜನೆ,ಇಂತಹ ನೂರಾರು ಯೋಜನೆಯ ಅನುಷ್ಠಾನ ತರುವ ನಿಟ್ಟಿನಲ್ಲಿ ಅದರಲ್ಲೂ ಮಹಾ ಮಾರಿ ಕೊವಿಡ್ 19 ನ ಸಂಧರ್ಭದಲ್ಲಿ ಭಾರತ ರಾಷ್ಟ್ರ ದ ಜನಸಾಮಾನ್ಯರ ಸುಭದ್ರತೆಗೆ ಹಗಲು ಇರುಳು ದುಡಿಯುತ್ತಿರುವ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರೋಗ್ಯ ವಾಗಿರಲೇಂದು ಅವರ 70 ನೇ ಹುಟ್ಟು ಹಬ್ಬಕ್ಕೆ ಜೋಡಿ ಬಸವೇಶ್ವರ ನಿಗೆ ಪೂಜೆ, ಅದರ ಸುತ್ತ ಮುತ್ತ ಸ್ವಚ್ಚತಾ,ಪ್ರಾಚಿನಕಾಲದ ಶಿಲೆಗಳಿಗೆ ಸುಣ್ಷ ಬಳಿದು ಮತ್ತು ಅವರ ಹೆಸರಿನಲ್ಲಿ 70 ಗಿಡಗಳು, ಮತ್ತು ಸಾರ್ವಜನಿಕ ರಿಗೆ ಉಚಿತವಾಗಿ ಸಿಹಿ ವಿತರಿಸಲಾಯಿತು ಎಂದು ತಿಳಿಸಿದರು..
ಈ ಸಂಧರ್ಭದಲ್ಲಿ ಭಾ.ಜ.ಪ.ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದ ರಾಜು, ನಗರ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ,ಪ್ರಧಾನ ಕಾರ್ಯದಶಿಗಳಾದ ವಾಣೀಶ್,ಗಿರಿಧರ್, ನಗರ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು,ಅಲ್ಪಸಂಖ್ಯಾತರ ಮೊರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಥಾಮಸ್, ಮೊರ್ಚಾ ಪ್ರಧಾನ ಕಾರ್ಯದರ್ಶಿ ಗಳಾದ ಗೋಪಾಲ್, ಮಣಿರತ್ನಂ, ಉಪಾಧ್ಯಕ್ಷ ಭರತ್,ಕಾರ್ಯದರ್ಶಿ ಶಿವರಾಜ್, ಹರೀಶ್,ಜಗದೀಶ್,ಸ್ವಾಮಿಗೌಡ,ಆನಂದ್,ನಾಗರಾಜು ರಾಜೀವ್ ಸ್ನೇಹ ಬಳಗದ ಸಂಚಾಲಕ ಕುಮಾರ್, ಮಂಡಲ ಅಧ್ಯಕ್ಷರುಗಳಾದ ನಾಗೇಶ್,ರಾಚಪ್ಪಾಜೀ,ಇದ್ದರು.
Key words: PM Modi’-s 70th Birthday- BJP-Rebuilding – cleaning – ancient- temple – Mysore.