ನವದೆಹಲಿ,ಜನವರಿ,7,2022(www.justkannada.in): ಪಂಜಾಬ್ ನ ಬಟಿಂಡಾದಲ್ಲಿ ಪ್ರಧಾನಿ ಮೋದಿ ಅವರ ಭದ್ರತಾ ವೈಪಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಣದ ದಾಖಲೆಗಳನ್ನು ಸುರಕ್ಷಿತವಾಗಿ ಮತ್ತು ಸಂರಕ್ಷಿಸಿಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಬುಧವಾರ ಫಿರೋಜ್‌ಪುರದಲ್ಲಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಹೊರಟಿದ್ದ ಪ್ರಧಾನಿ ಮೋದಿ ಅವರು ಪಂಜಾಬ್‌ನ ಬಟಿಂಡಾದಲ್ಲಿ ಸುಮಾರು 20 ನಿಮಿಷಗಳ ಕಾಲ ಫ್ಲೈಓವರ್‌ನಲ್ಲಿ ಸಿಲುಕಿಕೊಂಡರು. ಭದ್ರತಾ ಲೋಪವು ಬಿಜೆಪಿ ಮತ್ತು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ನಡುವೆ ದೊಡ್ಡ ರಾಜಕೀಯ ಘರ್ಷಣೆಯನ್ನು ಉಂಟುಮಾಡಿದೆ ಮತ್ತು ವಿಷಯವು ಸುಪ್ರೀಂಕೋರ್ಟ್‌ಗೆ ತಲುಪಿದೆ.
ಪ್ರಧಾನಿ ನಮ್ಮ ಪ್ರಧಾನಿಯೂ ಹೌದು ಎಂದು ನಮ್ಮ ಮುಖ್ಯಮಂತ್ರಿ ಹೇಳಿದ್ದಾರೆ. ಭದ್ರತಾ ಲೋಪದ ಬಗ್ಗೆಯೂ ತನಿಖೆ ನಡೆಸಬೇಕೆಂದು ನಾವು ಬಯಸುತ್ತೇವೆ. ನ್ಯಾಯಾಲಯಕ್ಕೆ ಯಾವುದು ಸೂಕ್ತವೋ ಅದನ್ನು ಮಾಡಬಹುದು.ನಾವು ಈ ಪ್ರಕರಣವನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ನಾವು ಸಮಿತಿಯನ್ನು ರಚಿಸಿದ್ದೇವೆ. ಕೇಂದ್ರವೂ ಸಹ ಸಮಿತಿಯನ್ನು ರಚಿಸಿದೆ. ನಾವು ಮುಕ್ತವಾಗಿದ್ದೇವೆ. ಈ ವಿಷಯದ ತನಿಖೆಗೆ ಯಾವುದೇ ವ್ಯಕ್ತಿಯನ್ನು ನೇಮಿಸಬಹುದು ಎಂದು ಪಂಜಾಬ್ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಹೇಳಿದೆ.
“ಪಂಜಾಬ್‌ನ ಗೃಹ ಸಚಿವರೂ ಈ ವಿಷಯದಲ್ಲಿ ಪರಿಶೀಲನೆಯಲ್ಲಿದ್ದಾರೆ. ಆದ್ದರಿಂದ ಅವರು ತನಿಖಾ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಭದ್ರತಾ ಲೋಪವು “ಅಪರೂಪದಲ್ಲಿ ಅಪರೂಪದ” ಪ್ರಕರಣವಾಗಿದ್ದು ಅದು ಸಂಭಾವ್ಯ ಅಂತರಾಷ್ಟ್ರೀಯ ಮುಜುಗರವನ್ನು ಉಂಟುಮಾಡಬಹುದು ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಅದೇ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಗೆ ಕರೆ ನೀಡುವ ಮನವಿಯನ್ನು ಬೆಂಬಲಿಸಿದೆ.
ಅಲ್ಲದೆ ಪ್ರಕರಣ ಸಂಬಂಧ ಪಂಜಾಬ್ ಸರ್ಕಾರ ತನಿಖೆ ನಡೆಸುವುದು ಬೇಡ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹಾಗೆಯೇ ಕೇಂದ್ರ ಸರ್ಕಾರದ ಸಮಿತಿಗೆ ಹಿಂದೆ ಸರಿಯುವಂತೆ ಸೂಚಿಸಿ ಎಂದು ಪಂಜಾಬ್ ಸರ್ಕಾರ ಮನವಿ ಮಾಡಿದ್ದು. ಸುಪ್ರೀಂ ನೇತೃತ್ವದಲ್ಲೇ ತನಿಖೆಯಾಗಲಿ ಹೇಳಿದೆ.
ಇನ್ನು ಸೋಮವಾರದವರೆಗೆ ತನಿಖಾ ಕಾರ್ಯಾಚರಣೆ ಬೇಡಸೋಮವಾರದವರೆಗೂ 2 ಸಮಿತಿಗಳು ತನಿಖಾ ಕಾರ್ಯಾಚರಣೆ ನಡೆಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
Key words: PM Modi – security -failure -Supreme Court- instructs