ನವದೆಹಲಿ,ಜುಲೈ,4,2024 (www.justkannada.in): ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಆಯೋಜಿಸಿದ್ದ 2024ರ ಟಿ-20 ವಿಶ್ವಕಪ್ ಅನ್ನು ಗೆದ್ದು ಚಾಂಪಿಯನ್ ಆಗಿ ತಾಯ್ನಾಡಿಗೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರನ್ನ ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರು.
ಟೀಮ್ ಇಂಡಿಯಾ ಆಟಗಾರರು ವಿಶ್ವಕಪ್ ನೊಂದಿಗೆ ಬಾರ್ಬಡೋಸ್ ನಿಂದ ಇಂದು ತವರಿಗೆ ಮರಳಿದ್ದು, ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಕೇಕ್ ಕತ್ತರಿಸಿ ಆಟಗಾರರು ಸಂಭ್ರಮಾರಣೆ ನಡೆಸಿದರು. ನಂತರ ಇಂದು ಟೀಂ ಇಂಡಿಯಾ ಆಟಗಾರರು ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿ ನೀಡಿದರು.
ಈ ವೇಳೆ ಪ್ರಧಾನಿ ಮೋದಿ ಅವರು ಆಟಗಾರರ ಜೊತೆ ಉಪಹಾರ ಸೇವಿಸಿದರು. ನಂತರ ವಿಶ್ವಕಪ್ ಹಿಡಿದು ಪ್ರಧಾನಿ ಮೋದಿ ಅವರ ಜೊತೆ ಕೆಲಹೊತ್ತು ಮಾತುಕತೆ ನಡೆಸಿದರು. ಇನ್ನು ಟೀಂ ಇಂಡಿಯಾ ಆಟಗಾರರ ಸಾಧನೆಯನ್ನ ಶ್ಲಾಘಿಸಿ ಪ್ರಧಾನಿ ಮೋದಿ ಸನ್ಮಾನಿಸಿದರು.
ಜೂನ್ 29 ರಂದು ನಡೆದ T20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಏಡೆನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು ಏಳು ರನ್ಗಳಿಂದ ಸೋಲಿಸಿ ಚಾಂಪಿಯನ್ ಆದರು. ಈ ನಡುವೆ ಜೂನ್ 30 ರಿಂದ ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಉಳಿದುಕೊಂಡಿದ್ದರು.
Key words: PM Modi, Team India, players, T20 World Cup