ಬೆಂಗಳೂರು,ಏಪ್ರಿಲ್,27,2021(www.justkannada.in): ಕೊರೋನಾ ನಿಯಂತ್ರಣ ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರಬರೆದು ನೀಡಿದ್ದ ಸಲಹೆಯನ್ನ ಪ್ರಧಾನಿ ನರೇಂದ್ರ ಮೋದಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದು ಕೊರೋನಾ ಕಂಟ್ರೋಲ್ ಕುರಿತು ಸಲಹೆ ನೀಡಿದ್ದರು. ಇದೀಗ ಹೆಚ್.ಡಿ ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಸಲಹೆ ಪರಿಗಣಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮೋದಿ ಅವರು ಕೆಲ ನಿಮಿಷಗಳ ಹಿಂದೆ ಕರೆ ಮಾಡಿದ್ದರು. ನಿನ್ನೆ ನಾನು ಬರೆದ ಪತ್ರ ಓದಿರುವುದಾಗಿ ತಿಳಿಸಿದರು. ನನ್ನ ಸಲಹೆಯನ್ನ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅವರ ಕಾಳಜಿ, ತ್ವರಿತ ಪ್ರತಿಕ್ರಿಯೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೆಚ್ ಡಿಡಿ ಟ್ವಿಟ್ ಮಾಡಿದ್ದಾರೆ.
ENGLISH SUMMARY…
PM Modi calls on former PM HDD: Shares information on twitter
Bengaluru, Apr. 27, 2021 (www.justkannada.in): In his response to former Prime Minister H.D. Deve Gowda’s letter regarding the controlling of COVID-19 Pandemic, Prime Minister Narendra Modi has replied that he would consider the former PM’s suggestion.
The former PM H.D. Devegowda had written a letter to Prime Minister Narendra Modi regarding the controlling of the pandemic. Following this Prime Minister Narendra Modi called upon H.D. Deve Gowda and replied that he would consider his request.
The former PM H.D. Deve Gowda himself has shared this information on Twitter. “Prime Minister Narendra Modi had called me and discussed with me for a few minutes. He informed me that he has read my letter and assured me that he would consider my suggestion. I wholeheartedly thank him for his concern and swift response,” the tweet read.
Keywords: Prime Minister Narendra Modi/ calls on former PM H.D. Deve Gowda/ twitter/ Corona control suggestion
Key words: PM Modi –telephones-Former Prime Minister -HD Deve Gowda – information – Twitter.