ನವದೆಹಲಿ,ಸೆಪ್ಟಂಬರ್,27,2021(www.justkannada.in): ಆಗಸ್ಟ್ 15 ಸ್ವಾತಂತ್ರ್ಯೋತಯ್ಸವದ ಭಾಷಣದ ವೇಳೆ ಘೋಷಿಸಿದ್ದ ಡಿಜಿಟಲ್ ಆರೋಗ್ಯ ಮಿಷನ್ ಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಈ ಯೋಜನೆ ಆರೋಗ್ಯ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನವನ್ನು ಒದಗಿಸುತ್ತದೆ ಮತ್ತು ಆರೋಗ್ಯ ವಲಯದಲ್ಲಿ ಹೊಸ ಹೊಸ ಅನ್ವೇಷಣೆಗೆ ದಾರಿಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಡಿಜಿಟಲ್ ಆರೋಗ್ಯ ಮಿಷನ್ ಒಂದು ಮಹತ್ವದ ಯೋಜನೆಯಾಗಿದ್ದು, ಇದರಡಿ ಪ್ರತಿ ಭಾರತೀಯನಿಗೂ ಒಂದು ಆರೋಗ್ಯ ಐಡಿ ನೀಡಲಾಗುತ್ತದೆ. ಇದು ಆ ವ್ಯಕ್ತಿಯ ಆರೋಗ್ಯ ಅಕೌಂಟ್ನಂತೆಯೂ ಕೆಲಸ ಮಾಡುತ್ತದೆ. ಮೊಬೈಲ್ ಆಯಪ್ನಲ್ಲಿ ಹೆಲ್ತ್ ಅಕೌಂಟ್ ರಚಿಸಿಕೊಂಡು, ಪ್ರತಿಯೊಬ್ಬರೂ ಅದರಲ್ಲಿ ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಿಕೊಳ್ಳಬಹುದು. ನಂತರ ಮೊಬೈಲ್ ಆಯಪ್ ಮೂಲಕವೇ ಅದನ್ನು ನೋಡಬಹುದಾಗಿದೆ.
ಇಂದು ಡಿಜಿಟಲ್ ಆರೋಗ್ಯ ಮಿಷನ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲ್ ಆರೋಗ್ಯ ಮಿಷನ್ನಿಂದ ದೇಶದ ಆರೋಗ್ಯ ಕ್ಷೇತ್ರ ಖಂಡಿತವಾಗಿಯೂ ಸಶಕ್ತಗೊಳ್ಳಲಿದೆ. ಕಳೆದ 7 ವರ್ಷಗಳಿಂದಲೂ ನಮ್ಮ ಸರ್ಕಾರ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಆ ಪ್ರಯತ್ನದ ಒಂದು ಭಾಗವಾಗಿ ಇಂದು ಅತ್ಯಂತ ಮಹತ್ವದ, ಮುಖ್ಯವಾದ ಹಂತಕ್ಕೆ ಕಾಲಿಡಲಾಗಿದೆ ಎಂದು ಹೇಳಿದರು.
Key words: PM-narendra Modi-launches- Ayushmann health- digital -project