ಮೈಸೂರು,ಏಪ್ರಿಲ್,28,2023(www.justkannada.in): ಇದೇ ಭಾನುವಾರ (ಏಪ್ರಿಲ್ 30)ದಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಲಿದ್ದು ನಗರಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಾಸಕ ಎಸ್.ಎ ರಾಮದಾಸ್ , ಇದೇ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಪ್ರಧಾನಿ ಮೋದಿ ಮೈಸೂರಿನ ಗನ್ ಹೌಸ್ ಸರ್ಕಲ್ ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಹಾಸನದ ಬೇಲೂರಿನಿಂದ ನೇರವಾಗಿ ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರಿನ ಸಂಪ್ರದಾಯದಂತೆ ನೂರಕ್ಕೂ ಹೆಚ್ಚು ನಾದ ಸ್ವರ, ಪೂರ್ಣಕುಂಭಗಳೊಂದಿಗೆ ಪ್ರಧಾನಿ ಮೋದಿಯವರನ್ನ ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತದೆ. ಜೊತೆಗೆ ಮೈಸೂರಿನ ದಸರಾ ಸಾಂಪ್ರದಾಯಿಕ ಮಾದರಿಯಲ್ಲಿ ಮೈಸೂರಿನ ಸಂಪ್ರದಾಯದ ಉಡುಗೆ ತೊಡುಗೆಗಳ ಮೂಲಕ ಅವರನ್ನ ಸ್ವಾಗತಿಸಲಾಗುತ್ತದೆ. ಗನ್ ಹೌಸ್ ನಿಂದ ಪಾಠಶಾಲೆ, ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ ಮೂಲಕ ಮಿಲೇನಿಯಂ ಸರ್ಕಲ್ ವರೆಗೂ ರೋಡ್ ಶೋ ನಡೆಯಲಿದೆ ಎಂದು ತಿಳಿಸಿದರು.
ಮಾರ್ಗ ಮಧ್ಯೆ ಮೋದಿಯವರ ಜೀವನದ ಯಶೋಗಾಥೆ ಸಾರುವ ಕಟೌಟ್ ಗಳನ್ನ ಅಳವಡಿಸಲಾಗುತ್ತದೆ. ಈ ರ್ಯಾಲಿ ಕೇವಲ ರೋಡ್ ಶೋ ಮಾಡಿ ಹೋಗುವಂತದ್ದಲ್ಲ. ಅವರು ನಡೆದು ಬಂದ ಹಾದಿಯನ್ನೂ ತೋರಿಸುವ ಪ್ರಯತ್ನ ನಡೆಯುತ್ತದೆ. ಸೀನಿಯರ್ ಸಿಟಿಜನ್ ಗೂ ಕೂಡ ಕುಳಿತು ನೋಡಲು ಕುರ್ಚಿಗಳ ವ್ಯವಸ್ಥೆ ಮಾಡಲಾಗುತ್ತದೆ. ಐದು ಸ್ಥಳಗಳಲ್ಲಿ ಸೀನಿಯರ್ ಸಿಟಿಜನ್ಸ್ ಕೂರಲು ವ್ಯವಸ್ಥೆ ಮಾಡಲಾಗುತ್ತದೆ. ಪೂರ್ಣಕುಂಭದ ಸ್ವಾಗತಕ್ಕೂ ವ್ಯವಸ್ಥೆ ಮಾಡಲಾಗಿದೆ. ಒಟ್ಟು ನಾಲ್ಕು ಕಿ.ಮೀ ರೋಡ್ ಶೋ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಶಾಸಕ ರಾಮದಾಸ್ ಮಾಹಿತಿ ನೀಡಿದರು.
Key words: PM-Narendra Modi – Mysore –April- 30th– road show – MLA -SA Ramdas