ನವದೆಹಲಿ,ಜ,20,2020(www.justkannada.in): ಪರೀಕ್ಷೆ ನೆನಪಿಸಿಕೊಂಡರೇ ಮೂಡ್ ಆಫ್ ಆಗುತ್ತದೆ ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಹೆತ್ತವರ ಶ್ರಮ ತಲೆಯಲ್ಲಿಟ್ಟುಕೊಳ್ಳಿ. ಆಗ ಮೂಡ್ ಆಫ್ ದೂರವಾಗುತ್ತೆ. ಹೆತ್ತವರ ಶ್ರಮ ನೋಡಿದ್ರೆ ಮೂಡ್ ಆಫ್ ಆಗಲ್ಲ ಎಂದು ಸಲಹೆ ನೀಡಿದರು.
ದೆಹಲಿಯ ತಾಲ್ ಕಟೋರ ಸ್ಟೇಡಿಯಂನಲ್ಲಿ ವಿದ್ಯಾರ್ಥಿಗಳ ಜತೆ ಪ್ರಧಾನಿ ಮೋದಿ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕದ 42 ವಿದ್ಯಾರ್ಥಿಗಳು ಸೇರಿ ವಿವಿಧ ರಾಜ್ಯಗಳ 2ಸಾವಿರ ಮಕ್ಕಳು ಭಾಗಿಯಾಗಿದ್ದು, 10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿರುವ ಸಲುವಾಗಿ ಈ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮವನ್ನ ಪ್ರಧಾನಿ ಮೋದಿ ನಡೆಸುತ್ತಿದ್ದಾರೆ.
ಸಂವಾದ ಕಾರ್ಯಕ್ರಮದಲ್ಲಿ ರಾಜಸ್ತಾನದ ವಿದ್ಯಾರ್ಥಿನಿಯೊಬ್ಬರು, ಎಕ್ಸಾಮ್ ನೆನಪಾದರೇ ಮೂಡ್ ಆಫ್ ಆಗುತ್ತೆ ಏಕೆ ಎಂದು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಹಾಕಿದ್ದಾರೆ. ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳಿಗೆ ಮೂಡ್ ಆಫ್ ಆಗಬಾರದು. ಮೂಡ್ ಆಫ್ ಆಗುವುದರಿಂದ ತಲೆಕೆಡುತ್ತೆ. ಮೂಡ್ ಆಫ್ ಆಗುವುದಕ್ಕಿಂತ ಜವಾಬ್ದಾರಿ ದೊಡ್ಡದು. ಹೆತ್ತವರ ಶ್ರಮವನ್ನ ತಲೆಯಲ್ಲಿಟ್ಟುಕೊಳ್ಳಿ. ಹೆತ್ತವರ ಶ್ರಮ ನೋಡಿದ್ರೆ ಮೂಡ್ ಆಫ್ ಆಗಲ್ಲ. ದೂರವಾಗುತ್ತದೆ. ಒತ್ತಡ ಹತಾಶೆಯಿಂದ ಹೊರಬನ್ನಿ ಎಂದು ಸಲಹೆ ನೀಡಿದರು.
ಮಕ್ಕಳ ಜತೆ ಚರ್ಚೆ ನನಗೆ ಇಷ್ಟ. ನನಗೂ ಸಹ ಇದು ಪರೀಕ್ಷಾ ಸಮಯ . ತಪ್ಪು ಆಗೋದು ಸಹಜ. ನನಗೂ ತಪ್ಪು ಆಗುತ್ತದೆ. ನಾನೂ ಕೂಡ ನಿಮ್ಮ ಕುಟುಂಬದ ಸದಸ್ಯ. ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಆತಂಕವಿದೆ. ನಾನೂ ಸಹ ಕಲಿಕಾ ಪ್ರಕ್ರಿಯೆಯಲ್ಲಿದ್ದೇನೆ. ಯಾರೂ ಸಹ ನೆಗೆಟಿವ್ ಆಗಿ ಯೋಚಿಸಬೇಡಿ. ಧನಾತ್ಮಕ ಚಿಂತನೆಗಳನ್ನ ಬೆಳೆಸಿಕೊಳ್ಳಿ. ಹತಾಶೆ, ಒತ್ತಡ ನೆಗೆಟಿವ್ ಮೂಡ್ ನಿಂದ ಹೊರಬನ್ನಿ ಮಕ್ಕಳು ಎಂದಿಗೂ ಸಕರಾತ್ಮಕವಾಗಿ ಯೋಚಿಸಬೇಕು ಎಂದು ಪ್ರಧಾನಿ ಮೋದಿ ನುಡಿದರು.
Key words: PM narendra modi- students- pariksha pe charcha 2020-parents