ಚಿತ್ರದುರ್ಗ, ನವೆಂಬರ್,3,2022(www.justkannada.in): ಅಪ್ರಾಪ್ತ ವಿದ್ಯಾರ್ಥಿನೀಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶ್ರೀ ಶಿವಮೂರ್ತಿ ಸ್ವಾಮೀಜಿಗಳ ನ್ಯಾಯಾಂಗ ಬಂಧನದ ಅವಧಿಯನ್ನ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ವಿಸ್ತರಿಸಿದೆ.
ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮುರುಘಾ ಶ್ರೀ , 2ನೇ ಆರೋಪಿ ಮಹಿಳಾ ವಾರ್ಡನ್, ಹಾಗೂ ನಾಲ್ಕನೇ ಆರೋಪಿ ಪರಮಶೀವಯ್ಯ ನ್ಯಾಯಾಂಗ ಬಂಧನದ ಅವಧಿಯನ್ನ ನವೆಂಬರ್ 8ರವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.
Key words: POCSO case- Muruga shri- judicial custody- extended.