ಮೈಸೂರು/ಚಾಮರಾಜನಗರ,ಆಗಸ್ಟ್,8,2023(www.justkannada.in): ಮಲೆ ಮಹದೇಶ್ವರ ಬೆಟ್ಟದಲ್ಲಿ ಗಾಂಜಾ ಮಾರಾಟ ಯತ್ನಿಸಿದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬೆಟ್ಟಕ್ಕೆ ಬರುವ ಭಕ್ತರಿಗೆ ಗಾಂಜಾ ಮಾರಾಟ ಮಾಡುತ್ತಿದ್ದವರನ್ನ ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಇನ್ಸ್ ಪೆಕ್ಟರ್ ನಂಜುಂಡಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನ ಬಂಧಿಸಿ 190 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಉದಯ ಕುಮಾರ್ (22),ಬೆಂಗಳೂರಿನ ಅಭಿಷೇಕ್(23) , ಹಾವೇರಿಯ ಆದರ್ಶ್ (22) ಬಂಧಿತ ಆರೋಪಿಗಳು.
ದಾಳಿಯಲ್ಲಿ ಪೊಲೀಸ್ ಪೇದೆಗಳಾದ ಅಸ್ಲಾಂ ಪಾಷ, ಪರಮಾನಂದ ಹಾಗೂ ಇನ್ನಿತರರು ಭಾಗಿಯಾಗಿದ್ದರು. ಪೊಲೀಸರು ಆರೋಪಿಗಳನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದು, ಈ ಕುರಿತು ಮಲೆ ಮಹದೇಶ್ವರ ಬೆಟ್ಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಲಕುಪ್ಪೆ ಪೊಲೀಸರ ಕಾರ್ಯಾಚರಣೆ: ಗಾಂಜಾ ಮಾರಾಟ ಮಾಡುತ್ತಿದ್ದ 5 ಜನ ಬಂಧನ
ಇನ್ನು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸರು ಗಾಂಜಾ ಅಡ್ಡ ಮೇಲೆ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ 5 ಜನರನ್ನ ಬಂಧಿಸಿದ್ದಾರೆ. ಟಿಬೆಟಿಯನ್ ಸೆಟಲ್ಮೆಂಟ್ ನಲ್ಲಿ ಐವರು ಯುವಕರನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಬಂಧಿತ ಆರೋಪಿಗಳು 29 ಕೆಜಿ ಒಣ ಗಾಂಜಾ ಶೇಖರಿಸಿಟ್ಟಿದ್ದರು. ಒರಿಸ್ಸಾ ಮೂಲದ ಬಿಕಾರಾಮ್ ನಾಯಕ್, ಜಂಶೀರ್, ನಾಯನ್ ದೀಪು, ಮಂಜು, ಅನಿಲ್ ಕುಮಾರ್, ಬಂಧಿತ ಆರೋಪಿಗಳು.
Key words: Police -Arrest – tried – sell- ganja-male mahadeswara hills-mysore