ಬೆಂಗಳೂರು,ಡಿಸೆಂಬರ್,18,2020(www.justkannada.in) : ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ ಪೊಲೀಸ್ ದಂಪತಿ ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕಂಟ್ರೋಲ್ ರೂಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ ಸ್ಟೆಬಲ್ ಶೀಲಾ ಮತ್ತು ಬಾಗಲೂರು ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆಕೆಯ ಪತಿ ಎಚ್.ಸಿ.ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಿನ್ನೆ ಮೀಟಿಂಗ್ ಹಿನ್ನೆಲೆ ರಾತ್ರಿವರೆಗೂ ಎಸಿಪಿ ಕಚೇರಿಯಲ್ಲಿಯೇ ಇದ್ದ ಸುರೇಶ್ ನಂತರ ಮನೆಗೆ ತೆರಳಿದ್ದಾರೆ. ಆದರೆ, ಬೆಳಿಗ್ಗೆ ಹೊತ್ತಿಗೆ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದ್ದು, ಸದ್ಯ ಈ ಪ್ರಕರಣ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
key words : Police-Couple-Surrender …!