ಮೈಸೂರು,ಫೆಬ್ರವರಿ,14,2025 (www.justkannada.in): ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗಗೆ ಮೈಸೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಒಂದು ದಿನ ಪೊಲೀಸ್ ಕಸ್ಟಡಿ ವಿಧಿಸಿದೆ.
ಇಂದು ಪೊಲೀಸರು ಆರೋಪಿ ಸತೀಶ್ ಅನ್ನು ಮೈಸೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಸರ್ಕಾರಿ ಅಭಿಯೋಜಕಿ ಸವಿತಾ ಅವರು ವಾದ ಮಂಡನೆ ಮಾಡಿದರು. ಆರೋಪಿಯನ್ನ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಎಪಿಪಿ ಮನವಿ ಮಾಡಿದರು.
ಆದರೆ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ಸತೀಶ್ ಪರ ವಕೀಲ ಅ.ಮ.ಭಾಸ್ಕರ್, ಕೇವಲ ಮೂರು ಗಂಟೆ ಪೊಲೀಸ್ ಕಸ್ಟಡಿಗೆ ನೀಡುವಂತೆ ವಾದಸಿದರು.
ಒಂದು ದಿನದ ಒಳಗೆ ಮಹಜರು ಕಾರ್ಯ ಮುಗಿಸಿ. ಕೃತ್ಯಕ್ಕೆ ಬಳಕೆಯಾದ ಮೊಬೈಲ್ ಸೀಜ್ ಮಾಡಿ ಎಂದು ಕೇವಲ ಒಂದು ದಿನ ಮಾತ್ರ ಆರೋಪಿ ಸತೀಶ್ ಅನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಧೀಶರಾದ ಸರೋಜ ಅವರು ಆದೇಶ ಹೊರಡಿಸಿದರು.
Key words: Udayagiri riot case, Accused, Satish , police custody