ನವದೆಹಲಿ,ಆಗಸ್ಟ್,3,2023(www.justkannada.in): ಗ್ಯಾರಂಟಿ ಯೋಜನೆಗಾಗಿ ಪೊಲೀಸ್ ಸಿಬ್ಬಂದಿ ಸಂಬಳ ನಿಲ್ಲಿಸಿಲ್ಲ. ನೌಕರರ ಸಂಬಳ ತಡೆದು ಗ್ಯಾರಂಟಿ ಯೋಜನೆ ನೀಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಜುಲೈ ತಿಂಗಳ ಪೊಲೀಸ್ ಇಲಾಖೆ ಸಿಬ್ಬಂದಿ ವೇತನ ವಿಳಂಬ ವಿಚಾರ ಕುರಿತು ದೆಹಲಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆಡಳಿತ ವ್ಯವಸ್ಥೆ ಹಾಗೂ ಬೇರೆ ಬೇರೆ ಕಾರಣಗಳಿಂದ ನಿಲ್ಲಿಸಲಾಗುತ್ತಿದೆ. ಯಾವುದೋ ಕಾರಣಕ್ಕೆ ಯಾದಗಿರಿ ಎಸ್ಪಿ ಸಂಬಳ ನಿಲ್ಲಿಸಿರಬಹುದು. ಗ್ಯಾರಂಟಿ ಯೋಜನೆಗೆ ಬೇಕಾದ ಹಣವನ್ನು ಬಜೆಟ್ನಲ್ಲಿ ಇಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಾಗಿ ಪೊಲೀಸ್ ಸಿಬ್ಬಂದಿ ಸಂಬಳ ನಿಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ತಡೆ ನೀಡಲಾಗಿದೆ. ಸ್ಥಳೀಯ ಶಾಸಕರು, ನಾಯಕರಿಂದಲೂ ಕೆಲವು ಆಕ್ಷೇಪ ಬಂದಿತ್ತು. ಹೀಗಾಗಿ ತಡೆಹಿಡಿಯಲಾಗಿದೆ, ಎಚ್ಚರಿಕೆಯಿಂದ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದರು.
Key words: Police department- staff -salary -delay – Home Minister-Dr. G. Parameshwar.