ಸಚಿವರ ಕ್ಷೇತ್ರದಲ್ಲೇ ಪೊಲೀಸ್ ಸಿಬ್ಬಂದಿ ಕೊರತೆಯಿಂದ ಠಾಣೆಗೆ ಬೀಗ

ಮೈಸೂರು,ಡಿಸೆಂಬರ್,16,2024 (www.justkannada.in): ಪೊಲೀಸ್ ಸಿಬ್ಬಂದಿಯ ಕೊರತೆಯಿಂದಾಗಿ   ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿನ ಪೊಲೀಸ್ ಠಾಣೆಗೆ ಬೀಗ ಹಾಕಲಾಗಿದೆ.

ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮೂಗೂರಿನಲ್ಲಿ ಪೊಲೀಸ್ ಉಪ ಠಾಣೆ ತೆರೆಯಲಾಗಿತ್ತು. ಸಚಿವ ಎಚ್ ಸಿ ಮಹದೇವಪ್ಪ ಪ್ರತಿನಿಧಿಸಿರುವ ಟಿ. ನರಸೀಪುರ ಕ್ಷೇತ್ರದ ಮೂಗೂರು ಗ್ರಾಮ ದೊಡ್ಡ ಹೋಬಳಿ ಕೇಂದ್ರವಾಗಿದ್ದು,  ಇಲ್ಲಿ 40 ವರ್ಷಗಳ ಹಿಂದೆಯೇ ಉಪ ಪೊಲೀಸ್ ಠಾಣೆಯನ್ನ ತೆರೆಯಲಾಗಿತ್ತು.

ಇದೀಗ ಸಿಬ್ಬಂದಿ ಕೊರತೆಯಿಂದಾಗಿ ಠಾಣೆಗೆ ಬೀಗ ಹಾಕಲಾಗಿದೆ.   ಪ್ರಸ್ತುತ ಒಬ್ಬ ಮುಖ್ಯ ಪೇದೆ ಹಾಗೂ ಒಬ್ಬ ಪೇದೆ ಮಾತ್ರ ಈ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇಬ್ಬರೂ ಸಿಬ್ಬಂದಿ ಬೇರೆಡೆಗೆ ಬಂದೋಬಸ್ತ್ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ. ಈ ನಡುವೆ ಪೊಲೀಸ್ ಠಾಣೆ ಇರಲಿ, ಸಿಬ್ಬಂದಿ ನೇಮಕ ಮಾಡಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

Key words: Shortage, police, Police station, closed