ಮುಂಬೈ,ಜೂನ್,27,2022(www.justkannada.in): ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರು ಬಂಡಾಯ ಏಳುವ ಮೂಲಕ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು ಇದೀಗ ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಹೌದು, ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ನೀಡಿರುವ ಅನರ್ಹತೆಗೆ ಸಂಬಂಧಿಸಿದ ನೊಟೀಸ್ ಅನ್ನು ಪ್ರಶ್ನಿಸಿ ಏಕನಾಥ್ ಶಿಂಧೆ) ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಇಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಈ ಪೈಕಿ ಒಂದು ಅರ್ಜಿಯನ್ನು ಶಿಂದೆ ಸಲ್ಲಿಸಿದ್ದರೆ, ಮತ್ತೊಂದು ಅರ್ಜಿಯನ್ನು 15 ಭಿನ್ನಮತೀಯ ಶಾಸಕರ ಗುಂಪಿನ ಪರವಾಗಿ ಭರತ್ ಗೊಗಾವಾಲೆ ಸಲ್ಲಿಸಿದ್ದಾರೆ. ಬಂಡಾಯವೆದ್ದಿರುವ 16 ಶಾಸಕರಿಗೆ ಮಹಾರಾಷ್ಟ್ರದ ಶಾಸಕಾಂಗ ಸಚಿವಾಲಯವು ಸಮನ್ಸ್ ಜಾರಿ ಮಾಡಿದೆ. ಅವರಿಗೆ ನೀಡಿರುವ ಅನರ್ಹತೆ ನೊಟೀಸ್ಗೆ ಜೂನ್ 27ರ ಒಳಗೆ ಉತ್ತರ ನೀಡಬೇಕು ಎಂದು ಡೆಪ್ಯುಟಿ ಸ್ಪೀಕರ್ ಸೂಚಿಸಿದ್ದಾರೆ.
Key words: political- crisis – Maharashtra – Supreme Court.