ಚಿತ್ರದುರ್ಗ, ಅಕ್ಟೋಬರ್,4,2024 (www.justkannada.in): ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಲಾಗಿದ್ದು ಇದು ತಾಯಿ ಚಾಮುಂಡೇಶ್ವರಿಗೆ ಮಾಡಿದ ಅಪಮಾನ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿ ಸಾಹಿತಿ ಹಂಪಾ ನಾಗರಾಜಯ್ಯ ವಿರುದ್ದ ಕಿಡಿಕಾರಿದ ಆರ್.ಅಶೋಕ್, ದಸರಾ ಉದ್ಘಾಟನೆ ವೇಳೆ ಕೇವಲ ರಾಜಕೀಯ ಭಾಷಣ ಮಾಡಲಾಗಿದೆ. ದಸರಾ ಉದ್ಘಾಟನೆ ಮಾಡಿದ್ದು ಸಾಹಿತಿನೋ ಅಥವಾ ಯಾರು ಅನ್ನೋದು ಅನುಮಾನ. ಅವರೂ ಕೇಂದ್ರದ ವಿರದ್ದ ಟೀಕಿಸಿ ಭಾಷಣ ಮಾಡಿದರು. ಸರ್ಕಾರ ಪತನ ರಾಜೀನಾಮೆಯ ಬಗ್ಗೆಯಷ್ಟೆ ಮಾತನಾಡಿದ್ದಾರೆ. ತಾಯಿ ಚಾಮುಂಡಿ ಸಂಸ್ಕೃತಿ ಮರೆತು ರಾಜಕೀಯ ಭಾಷಣ ಮಾಡಿದ್ದಾರೆ ಮುಡಾ ಹಗರಣ ಪ್ರಶ್ನಿಸಿದವರು ಯಾರು..? ಜ್ಞಾನ ಇರಬೇಕಲ್ಚಾ..? ಎಂದು ವಾಗ್ದಾಳಿ ನಡೆಸಿದರು.
ಮುಡಾ ಹಗರಣದಲ್ಲಿ ಸಿದ್ದಾರಾಮಯ್ಯ ಹಿಂಬಾಲಕರೇ ಅವರಿಗೆ ಖೆಡ್ಡಾ ತೋಡಿದಿದ್ದಾರೆ. ಕಾಂಗ್ರೆಸ್ಸಿಗರು ನನ್ನ ರಾಜೀನಾಮೆ ಕೇಳಿದ್ದರು. ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆಗೆ ಸಿದ್ದ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ 24 ಗಂಟೆ ಗಡುವು ನೀಡಿದ್ದೇವೆ. ಕಾಂಗ್ರೆಸ್ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮಗೆ ಧೈರ್ಯ ತೋರಿಸಲಿ ಎಂದು ಲೇವಡಿ ಮಾಡಿದರು.
ನಾವಂತೂ ಸರ್ಕಾರ ಬೀಳಿಸಲು ಹೋಗಲ್ಲ. ಪಾಪದ ಕೊಡ ತುಂಬಿದ ಮೇಲೆ ಬೀಳಬೇಕು . ಏಳೆಂಟು ಸಚಿವರ ಸಿಎಂ ಕುರ್ಚಿಗೆ ಟವಲ್ ಹಾಕಿದ್ದಾರೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.
Key words: Political speech, Dasara inauguration, R. Ashok, outrage