ಕಲ್ಬುರ್ಗಿ,ನವೆಂಬರ್,14,2022(www.justkannada.in): ಶಾಲಾ ಕೊಠಡಿಗಳಲ್ಲಿ ಕೇಸರಿ ಬಣ್ಣ ಹಚ್ಚುವ ವಿಚಾರಕ್ಕೆ ಕಾಂಗ್ರೆಸ್ ಟೀಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಕಲ್ಬುರ್ಗಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಏನೇ ಅಭಿವೃದ್ದಿ ಮಾಡಿದ್ರೂ ವಿವಾದ ಮಾಡುವ ಕೆಲಸವಾಗುತ್ತಿದೆ. ಟೀಕೆ ಮಾಡುವವರಿಗೆ ಅಭಿವೃದ್ದಿ ಬೇಕಾಗಿಲ್ಲ. ಶಾಲಾ ಕೊಠಡಿಗಳ ನಿರ್ಮಾಣದಲ್ಲೂ ರಾಜಕಾರಣ ಸರಿಯಲ್ಲ. ಕೇಸರಿ ಅಂದರೇ ಭಯವೇಕೆ ನಮ್ಮ ರಾಷ್ಟ್ರಧ್ವಜದಲ್ಲೂ ಕೇಸರಿ ಇದೆ.
ಸ್ವಾಮಿ ವಿವೇಕಾನಂದರೂ ಕೂಡ ಕೇಸರಿ ಬಟ್ಟೆ ಹಾಕುತ್ತಿದ್ದರು. ಕೇಸರಿ ಕಂಡರೇ ಅವರಿಗೆ ಯಾಕೆ ಅಷ್ಟು ಅಲರ್ಜಿ..? ವಿವೇಕಾನಂದರ ಹೆಸರಲ್ಲಿ ವಿವೇಕ ಯೋಜನೆ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದರು.
Key words: Politics -school –room- construction- CM- Basavaraj Bommai