ಮೈಸೂರು,ಜೂ,8,2020(www.justkannada.in): ಮೈಶುಗರ್ ಕಾರ್ಖಾನೆಯನ್ನ ಖಾಸಗೀಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದನ್ನ ನಾನು ಖಂಡಿಸುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮೈಸೂರಿನಲ್ಲಿ ಇಂದು ಮಾಧ್ಯಮದವರ ಜತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಅವರು, ನನ್ನ ಮೊದಲ ಆದ್ಯತೆ ,ಹೋರಾಟ ರೈತರಿಗಾಗಿ. ಅವರ ಕಷ್ಟ ನಮಗೆ ಗೊತ್ತಿದೆ. ಪ್ರತಿ ವರ್ಷ ಕಬ್ಬು ಕಟಾವು ಸಂದರ್ಭದಲ್ಲಿ ಅವರಿಗೆ ತುಂಬ ಕಷ್ಟ ಆಗ್ತಿದೆ. ಈಗಾಗಲೇ ಎರಡು ಕಾರ್ಖಾನೆಗಳು ಮುಚ್ಚಿವೆ. ಆದರೆ ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನೆರಡು ವರ್ಷದಲ್ಲಿ ಕಾರ್ಖಾನೆ ಓಪನ್ ಆಗುತ್ತದೆ ಎಂಬುದಾಗಿದೆ. ಕಾರ್ಖಾನೆ ಖಾಸಗೀಕರಣದಿಂದ ಯಾರಿಗೂ ಕಷ್ಟ ಆಗುವುದಿಲ್ಲ. ರೈತರಿಗೆ ಕಷ್ಟ ಆಗಬಾರದು. ರೈತರಿಗೆ ಅನುಕೂಲ ಆಗಬೇಕು. ಅದಕ್ಕಾಗಿ ನಾನು ಈಗಾಗಲೇ ಸಿಎಂ ಇದಕ್ಕೆ ಸಂಬಂಧಿಸಿದ ಸಚಿವರ ಜೊತೆ ಮಾತನಾಡಿದ್ದೇನೆ. ಮೈಶುಗರ್ ಕಾರ್ಖಾನೆ ನಡೆಸಲು ಆಗುವುದಿಲ್ಲ ಎಂಬುದನ್ನ ಸಿಎಂ ಖುದ್ದಾಗಿಯೇ ಹೇಳಿದ್ದಾರೆ. ಕಾರ್ಖಾನೆಯ ಸಮಸ್ಯೆಗಳ ಬಗ್ಗೆಯೂ ಹೇಳಿದ್ದಾರೆ. ಈಗಾಗಲೇ 420 ಕೋಟಿ ಹಾಕಿ ನಷ್ಟ ಆಗಿದೆ. ಮತ್ತೆ ಅದನ್ನೇ ಮುಂದುವರಿಸಲು ಆಗುವುದಿಲ್ಲ ಎಂದಿದ್ದಾರೆ. ಸರ್ಕಾರ ಮುಂದುವರಿಸಲು ಆಗದೇ ಇರುವಾಗ ಖಾಸಗಿಯವರಿಗೆ ನೀಡಿದರೆ ಏನು ಆಗುವುದಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಆಗುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
Key words: Politics – Sugar factory- privatization- Mysore –MP-Sumalatha Ambarish