ಬೆಂಗಳೂರು, ನವೆಂಬರ್ 10, 2021 (www.justkannada.in): ನಟಿ ಪೂನಂ ಪಾಂಡೆ ತಲೆ, ಕಣ್ಣು ಹಾಗೂ ಮುಖಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಮೇಲೆ ಪತಿ ದೌರ್ಜನ್ಯ ನಡೆಸಿದ್ದಾರೆ ಎಂದು ಪೂನಂ ಪಾಂಡೆ ಆರೋಪಿಸಿದ್ದಾರೆ.
ಪೂನಂ ಪಾಂಡೆ ಪತಿ, ನಿರ್ದೇಶಕ, ನಿರ್ಮಾಪಕ ಹಾಗೂ ಸಂಪಾದಕ ಸ್ಯಾಮ್ ಬಾಂಬೆ ಅಲಿಯಾಸ್ ಸ್ಯಾಮ್ ಅಹಮದ್ ಬಾಂಬೆಯನ್ನು ಸೋಮವಾರ ಬಂಧಿಸಿರುವುದಾಗಿ ಹೇಳಿದ್ದಾರೆ.
ಪೂನಂ ಪಾಂಡೆ ಮೇಲೆ ಅವರ ಪತಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರು ನೀಡಿದ ಬಳಿಕ ಸ್ಯಾಮ್ ಅವರನ್ನು ನಿನ್ನೆ ಬಂಧಿಸಿದ್ದೇವೆ. ಪ್ರಸ್ತುತ ನಟಿ ಪೂನಂ ಪಾಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.