ಮೈಸೂರು,ಸೆಪ್ಟೆಂಬರ್,23,2020(www.justkannda.in) : ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಸೆ.24ರಂದು ”ಪೂನಾ ಒಪ್ಪಂದದ ದಿನ’’ ರಾಷ್ಟ್ರೀಯ ವೆಬಿನಾರ್ ಆಯೋಜಿಸಲಾಗಿದೆ.ಬೆಳಗ್ಗೆ 11ಕ್ಕೆ ವೆಬಿನಾರ್ ಅನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟನೆ ಮಾಡಲಿದ್ದು, ರಾಜಕೀಯ ಮೀಸಲಾತಿ ಕುರಿತ ವಿಮರ್ಶಾತ್ಮಕ ಮೌಲ್ಯಮಾಪನ ವಿಷಯ ಬಗ್ಗೆ ಜೆಎನ್ ಯು ರಾಜಕೀಯ ಅಧ್ಯಯನ ಕೇಂದ್ರ ನಿವೃತ್ತ ಪ್ರಾಧ್ಯಾಪಕ ಡಾ.ಗೋಪಾಲ್ ಗುರು ಮಾತನಾಡುವರು. ವೆಬಿನಾರ್ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಡಿ.ಜೀವನ್ ಕುಮಾರ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಮೀಟಿಂಗ್ ಐಡಿ : 95695984742, ಪಾಸ್ ಕೋಡ್ : 200601 ಮೂಲಕ ಭಾಗವಹಿಸಬಹುದಾಗಿದೆ ಎಂದು ಪ್ರೊ.ಜೆ.ಸೋಮಶೇಖರ್ ತಿಳಿಸಿದ್ದಾರೆ.
key words : Poona-tomorrow-Mysore Vivi-National-webinar-contract-day