ಬೆಂಗಳೂರು, ಮಾರ್ಚ್ 21, 2022 (www.justkannada.in): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಳಪೆ ಎಂದು ನಿರ್ಧರಿಸಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಳಪೆ ಎಂದು ನಿರ್ಧರಿಸಿದೆ. ಕರ್ನಾಟಕದ ಜಾವಗಲ್ ಶ್ರೀನಾಥ್ ಅವರು ಪಿಚ್ ಗುಣಮಟ್ಟದ ವರದಿಯನ್ನು ಬಿಸಿಸಿಐಗೆ ರವಾನಿಸಿದ್ದಾರೆ.
ಹೊರ ಮೈದಾನದ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡದ ಹಿನ್ನೆಲೆಯಲ್ಲಿ 1 ಋಣಾತ್ಮಕ ಅಂಕ ಕೊಟ್ಟಿದೆ. ಪಂದ್ಯದ ರೆಫ್ರಿಯಾಗಿದ್ದ ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ ಜಾವಗಲ್ ಶ್ರೀನಾಥ್ ಅವರು ಪಿಚ್ ಗುಣಮಟ್ಟದ ವರದಿಯನ್ನು ಬಿಸಿಸಿಐಗೆ ರವಾನಿಸಿದ್ದಾರೆ.
2018ರಲ್ಲಿ ಐಸಿಸಿ ಪಿಚ್ ಗುಣಮಟ್ಟದ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಕಳಪೆ ಪಿಚ್ ಎಂದು ನೀಡಲಾಗುವ ಡೀಮೆರಿಟ್ ಅಂಕಗಳು 5 ವರ್ಷಗಳ ಕಾಲ ಉಳಿಯಲಿದೆ.