ಪಾಪ್ ಸಿಂಗರ್ ರಿಹಾನ ಭತ್ತದ ಗದ್ದೆ ನೋಡಿದ್ದಾರಾ..? : ಕೇಂದ್ರ ಸಚಿವ ಸದಾನಂದಗೌಡ ಕಿಡಿ

ಮೈಸೂರು,ಫೆಬ್ರವರಿ,06,2021(www.justkannada.in) : ಪಾಪ್ ಸಿಂಗರ್  ರಿಹಾನ ಏನು ರೈತರ ಕಷ್ಟದ ಬಗ್ಗೆ ಮಾತನಾಡೋದು. ರಿಹಾನಗೆ ರೈತರ ಶ್ರಮದ ಬಗ್ಗೆ ಏನು ಗೊತ್ತಿದೆ. ರಿಹಾನಗೆ ಭತ್ತದ ಗದ್ದೆ ನೋಡಿದ್ದಾರಾ? ಎಂದು ಕೇಂದ್ರ ಸಚಿವ ಸದಾನಂದಗೌಡ ರಿಹಾನ ವಿರುದ್ಧ ಕಿಡಿಕಾರಿದರು.jkಮೈಸೂರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹುಶಃ ರಿಹಾನ ಭತ್ತದ ಗದ್ದೆ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಹೋಗಿರಬಹುದು. ರೈತರು ಹೇಗೆ ಮಾರಾಟ ಮಾಡ್ತಾರೆ ಅಂತ ರಿಹಾನೆಗೆ ಗೊತ್ತಾ ? ವಿದೇಶಿ ಕೈಗೊಂಬೆಯಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರು ಯಾವತ್ತಾದರೂ ಭತ್ತದ ಗದ್ದೆ ನೋಡಿದ್ದಾರಾ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳೆದ ಬೆಳೆಯನ್ನ ಮುಕ್ತವಾಗಿ ಮಾರಲು ರೈತರಿಗೆ ಸ್ವಾತಂತ್ರ್ಯ

ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ರೈತನಿಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ. ರೈತರು ಈಗ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಬೇಕಾದವರಿಗೆ ಬೆಳೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವಾಗಿದೆ. ರೈತನಿಗೆ ಬೆಳೆದ ಬೆಳೆಯನ್ನ ಮುಕ್ತವಾಗಿ ಮಾರಲು ಸ್ವಾತಂತ್ರ್ಯ ನೀಡುತ್ತಿದ್ದೇವೆ. ತನ್ನ ಬೆಳೆಗೆ ಯಾರಾದರೂ ಹೆಚ್ಚು ಬೆಲೆ ಕೊಡುತ್ತಾರೆ ಎಂದರೆ ಕೊಡಲಿ ಬಿಡಿ. ಸುಮ್ಮನೆ ಯಾಕೇ ಹಠ ಮಾಡ್ತೀರಾ? ಎಂದು ಪ್ರಶ್ನಿಸಿದ್ದರು.

ಬಂಡವಾಳ ಶಾಹಿಗಳ ಕೈಗೊಂಬೆಯಾಗುತ್ತಾರೆ ಎನ್ನುವುದು ಸುಳ್ಳು

ರೈತರಿಗೆ ಬೆಂಬಲ ನೀಡಿದ್ದು, ಮೋದಿ ಸರ್ಕಾರ. ರೈತರು  ಎಪಿಎಂಸಿ ಕೈಗೊಂಬೆಯಾಗಿ ಇರೋದು ಬೇಡ. ರೈತರು ಸ್ವತಂತ್ರವಾಗಿ ಬೆಳೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದೇವೆ. ಬಂಡವಾಳ ಶಾಹಿಗಳ ಕೈಗೊಂಬೆಯಾಗುತ್ತಾರೆ  ಎನ್ನುವುದು ಸುಳ್ಳು ಎಂದು ಹೇಳಿದರು.

ಪಟ್ಟಭದ್ರ ಹಿತಾಸಕ್ತಿಯಿಂದ ಈ ಪ್ರತಿಭಟನೆPop Singer-Rihanna-Paddy-beard-seen-Union Minister-Sadananda Gowdaಪಟ್ಟಭದ್ರ ಹಿತಾಸಕ್ತಿಯಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ಕೃಪಾಪೋಷಿತ ಜನರ ಪ್ರೇರಣೆಯಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ರಾಜಿ ಆಗಿದ್ದೀವಿ. ಮಾತುಕತೆಗೂ ಸಿದ್ಧರಿದ್ದೀವಿ, ಆದರೆ, ರೈತರೆ ಹಠ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ENGLISH SUMMARY…

What does pop singer Rihanna know about farmers efforts? Union Minister D.V. Sadanandagowda
Mysuru, Jan. 06, 2021 (www.justkannada.in): “What does Rihanna know about our farmers? Has she ever visited a paddy field? Who is pop singer Rihanna to talk about the problems of our farmers?” questioned Union Minister Sadananda Gowda.Pop Singer-Rihanna-Paddy-beard-seen-Union Minister-Sadananda Gowda
Speaking to the press persons, he expressed his ire upon the foreign pop singer by saying, “She might have taken a snap by standing in front of paddy filed. Does she know how farmers sell their produce? She is giving statements as a foreigner.”
“Modi government is supporting the farmers it intends farmers should not be puppets of APMC. The objective is to provide a free market for the farmers to sell their hard grown produce. A few people are spreading false news that farmers will become slaves of capitalists,” he said.
Keywords: Union Minister D.V. Sadananda Gowda/ ire on pop singer Rihanna

key words : Pop Singer-Rihanna-Paddy-beard-seen-Union Minister-Sadananda Gowda