ಬೆಂಗಳೂರು,ಫೆಬ್ರವರಿ,1,2022(www.justkannada.in): ಇಂದಿನ ಮಕ್ಕಳಿಗೆ ಆಕ್ಷನ್ ಇರುವ ಕಾರ್ಟೂನ್ಸ್ ಎಂದರೆ ಹೆಚ್ಚು ಆಸಕ್ತಿ. ವಿದೇಶಗಳಲ್ಲಿ ಈಗಾಗಲೇ ಜನಪ್ರಿಯಗೊಂಡಿರುವ ಸಾಹ¸ಮಯ “ಬ್ಲೇಜಿಂಗ್ ಟೀಮ್ಸ್” ಕಾರ್ಟೂನ್ ಸೀಸನ್ ಇದೀಗ ಭಾರತದಲ್ಲಿ ವೂಟ್ ಕಿಡ್ಸ್ನಲ್ಲಿ ಬಿಡುಗಡೆಯಾಗುತ್ತಿದೆ.
ಚೀನಾ ಮೂಲದ ಆಲ್ಫಾ ಸಮೂಹ ನಿರ್ಮಾಣ ಮಾಡಿರುವ ಬ್ಲೇಜಿಂಗ್ ಟೀಮ್ಸ್ ಅತ್ಯಂತ ಜನಪ್ರಿಯಾ ಸೀರಿಸ್ ಆದ, ಮಕ್ಕಳಿಗೆ ಹೆಚ್ಚು ಆಸಕ್ತಿದಾಯವೆನಿಸುವ ಸೀರಿಸ್ ಇದಾಗಿದೆ. ವಿದೇಶಗಳಲ್ಲಿ ಈಗಾಗಲೇ ಈ ಸೀರಿಸ್ ಯಶಸ್ವಿಯಾಗೊಂಡಿದೆ. ಹೀಗಾಗಿ ಭಾರತದಲ್ಲೂ ಈ ಸರಣಿಯನ್ನು ಬಿಡುಗಡೆ ಮಾಡಲು ಮಾರ್ಷಲ್ ಆರ್ಟ್ಸ್ ಹಾಗೂ ಯೋ-ಯೋ ಸಂಸ್ಥೆ ಜೊತೆಗೂಡಿ ವೂಟ್ ಕಿಡ್ಸ್ನಲ್ಲಿ ಬಿಡುಗಡೆ ಮಾಡುತ್ತಿದೆ.
ಬ್ಲೇಜಿಂಗ್ ಟೀಮ್ಸ್ ಕಾರ್ಟೂನ್ನ ಪ್ರಮುಖ ಪಾತ್ರದಾರಿ ಎಂದರೆ ಪಾರ್ಕರ್ ಬೇಟ್ಸ್. ಇವರೊಟ್ಟಿಗೆ ಮ್ಯಾಡೀ ಸ್ಟೋನ್, ಸ್ಕಾಟ್ ಹಾರ್ಡೊ. ವಿಲ್ಸನ್ ಟಿಷ್ ಈ ಹೆಸರಿನ ಮಕ್ಕಳು ಬ್ಲೇಜಿಂಗ್ ಟೀಮ್ಸ್ನ ಪ್ರಮುಖ ಪಾತ್ರಗಳಾಗಿವೆ. ಈ ಮಕ್ಕಳಿಗೆ ಶಿಕ್ಷಕ ಲಾವೋ-ಷಿ ಮಾರ್ಗದರ್ಶಕ. ಈ ಮಕ್ಕಳು ತಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮವರನ್ನು ಕೆಟ್ಟವರಿಂದ ಹೇಗೆ ರಕ್ಷಿಸುತ್ತಾರೆ, ಇವರ ಸಾಹಸಗಳು ಎಂಥದ್ದು ಎನ್ನುವುದೇ ಈ ಸೀರಿಸ್ನ ಆಸಕ್ತಿದಾಯಕ ವಿಷಯ.
ಈ ಕುರಿತು ಮಾತನಾಡಿ ವೂಟ್ ಕಿಡ್ಸ್ ಹೆಡ್ ಆಫ್ ಕಂಟೆಂಟ್ ಆದ ಅಶುತೋಷ್ ಪರೇಖ್, ಬ್ಲೇಜಿಂಗ್ ಟೀಮ್ಸ್ ಈಗಾಗಲೇ ಜನಪ್ರಿಯಗೊಂಡ ಆನಿಮೇಷನ್ ಕಿಡ್ ಶೋ.. ಭಾರತದಲ್ಲಿ ಮಕ್ಕಳಿಗೂ ಈ ಶೋ ಬಗ್ಗೆ ಹೆಚ್ಚು ಆಸಕ್ತಿ ಇದೆ. ಯೂಟ್ಯೂಬ್ನಲ್ಲಿ ಬಿಲಿಯನ್ ಗಟ್ಟಲೇ ವೀಕ್ಷಣೆ ಪಡೆದಿರುವ ಈ ಕಾರ್ಟೂನ್ನ ಟೀಸರ್ ಮಕ್ಕಳಲ್ಲಿ ಇನ್ನಷ್ಟು ಆಸಕ್ತಿ ಮೂಡಿಸಿದೆ ಎಂದರು. ವೂಟ್ನಲ್ಲಿ ಮಕ್ಕಳಿಗೋಸ್ಕರ ಹಲವಾರು ಆನಿಮೇಷನ್ ಶೋಗಳು ಈಗಾಗಲೇ ರಂಜಿಸುತ್ತಿವೆ. ಮಕ್ಕಳಿಗೋಸ್ಕರ ಇನ್ನಷ್ಟು ವಿಶೇಷತೆಗಳನ್ನೊಳಗೊಂಡ ಕಾರ್ಟೂನ್ಸ್ ನೀಡುವುದೇ ನಮ್ಮ ಉದ್ದೇಶ ಎಂದು ಹೇಳಿದರು.
key words: popular- Blazing -Teams -cartoon -released -India.