ಬೆಂಗಳೂರು,ಅಕ್ಟೋಬರ್,22,2020(www.justkannada.in): ಹೊರಗಿನಿಂದ ನಾಲ್ಕು ಸಾವಿರ ಜನ ಬಂದಿದ್ದಾರೆ. ಹಾಗೆಯೇ ಆರ್.ಆರ್ ನಗರ ಕ್ಷೇತ್ರದಲ್ಲಿ ಕೊಲೆಗಳಾಗುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿನ್ನೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹಾಗೆಯೇ ಮುನಿರತ್ನ ಬೆಂಬಲಿಗರ ವಿರುದ್ಧ ದೂರು ನೀಡಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ. ಹೊರಗಿನಿಂದ ನಾಲ್ಕು ಸಾವಿರ ಜನ ಬಂದಿದ್ದಾರೆ. ಹೊರಗಿನಿಂದ ಬಂದವರು ಮತದಾರರ ಮಾಹಿತಿ ದಾಖಲೆ ಸಂಗ್ರಹಿಸುತ್ತಿದ್ದಾರೆ. ಈ ರೀತಿ ಯಾವತ್ತೂ ಕ್ಷೇತ್ರದಲ್ಲಿ ಆಗಿರಲಿಲ್ಲ. ಈ ಎಲೆಕ್ಷನ್ ನಲ್ಲಿ ವೈಯಕ್ತಿಕ ದ್ವೇಷ ಹೆಚ್ಚು ಕಂಡು ಬಂದಿದೆ. ಹೊರಗಿನಿಂದ ಬಂದವರಿಂದ ಕ್ಷೇತ್ರದಲ್ಲಿ ಕೊಲೆ ಮಾಡುವ ಸಾಧ್ಯತೆ ಇದೆ. ಹೊರಗಿನಿಂದ ಬಂದವರು ಕೊಲೆ ಮಾಡುವವರೆಗೆ ಹೋಗಬೇಡಿ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಸಮಸ್ಯೆಗಳಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ನ್ಯಾಯಯುತ ಚುನಾವಣೆಗೆ ಸೇನಾಪಡೆ ಅವಶ್ಯಕ ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡುತ್ತೇನೆ. ಹೊರಗಿನಿಂದ ಬಂದವರು ಮತದಾರರ ದಾಖಲೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮ್ಮವರ ಮೇಲೆ ದೂರು ನೀಡಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.
Key words: possibility – murders – RR nagar-BJP candidate -Muniratna