ದುಬೈ, ನವೆಂಬರ್ 20, 2020 (www.justkannada.in): ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯನ್ನು 2022ರಿಂದ 2023ಕ್ಕೆ ಮುಂದೂಡಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗುರುವಾರ ನಿರ್ಧರಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ 2022ರ ನವೆಂಬರ್ನಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ತೀರ್ಮಾನ ಮಾಡಿತ್ತು. ಆದರೆ ಈಗ ಹೊಸ ವೇಳಾಪಟ್ಟಿ ಪ್ರಕಾರ 2023ರ ಫೆಬ್ರುವರಿಯಲ್ಲಿ ನಡೆಯಲಿದೆ. ಒತ್ತಡ ಕಡಿಮೆ ಮಾಡುವ ಉದ್ದೇಶದಿಂದಾಗಿ ಈ ತೀರ್ಮಾನ ಮಾಡಲಾಗಿದೆ.
ಮುಂದಿನ ವರ್ಷ ನ್ಯೂಜಿಲೆಂಡ್ನಲ್ಲಿ ನಡೆಸಲು ಉದ್ದೇಶಿಸಿದ್ದ 50 ಓವರ್ಗಳ ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡಲು ಕಳೆದ ಆಗಸ್ಟ್ ತಿಂಗಳಲ್ಲಿ ಐಸಿಸಿ ನಿರ್ಧರಿಸಿತ್ತು.
2022ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳೆಯರ ಕ್ರಿಕೆಟ್ ಸೇರಿಸಲು ಆಯೋಜಕರು ನಿರ್ಧರಿಸಿರುವುದರಿಂದ ಒಂದೇ ವರ್ಷ ಸತತ ಪಂದ್ಯಗಳನ್ನು ಆಡಿದಂತೆ ಆಗುತ್ತದೆ ಎಂಬ ಕಾರಣಕ್ಕೆ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆ.