ಮೈಸೂರು, ಮೇ.17, 2024: (www.justkannada.in news ) ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಮೇ 15 ರಿಂದಲೇ ತರಗತಿಗೆ ಹಾಜರಾಗಲು ಹೈಸ್ಕೂಲ್ ಶಿಕ್ಷಕರಿಗೆ ಸೂಚಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರ ಹಿಂಪಡೆದಿದೆ. ಆ ಮೂಲಕ ಮೇ 28 ರ ತನಕ ಬೇಸಿಗೆ ರಜೆ ಎಂದಿನಂತೆ ಮುಂದುವರೆಯಲಿದೆ.
ಬೇಸಿಗೆ ರಜೆ ಕಡಿತಗೊಳಿಸಿ ವಿಶೇಷ ತರಗತಿ ನಡೆಸುವ ಸಂಬಂದ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಸ್ಕೂಲ್ ಶಿಕ್ಷಕ ವೃಂದದಿಂದ ತೀವ್ರ ಅಸಮಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರಿ ಆದೇಶವನ್ನು ಮರು ಪರಿಶೀಲಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಇದರನ್ವಯ ಮೇ. 28 ರ ತನಕ ಬೇಸಿಗೆ ರಜೆ ಮುಂದುವರೆಯಲಿದೆ.
ಹಿನ್ನೆಲೆ :
2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಅನುತ್ತೀರ್ಣವಾಗಿರುವ ವಿದ್ಯಾರ್ಥಿಗಳಿಗೆ ಮೇ 15 ರಿಂದ ವಿಶೇಷ ತರಗತಿಗಳನ್ನು ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಡಿಯೋ ಕಾನ್ಸರೆನ್ಸ್ ನಲ್ಲಿ ತಿಳಿಸಿರುವಂತೆ ನಿರ್ದೇಶಕರು ಪ್ರೌಢ ಶಿಕ್ಷಣ ರವರು ಸುತ್ತೋಲೆ ಹೊರಡಿಸಿದ್ದರು.
ಶಿಕ್ಷಕರಿಗೆ ದಿನಾಂಕ 28.05.2023ರ ವರೆಗೆ ಬೇಸಿಗೆ ರಜೆ ಇರುವುದರಿಂದ ಹಾಗೂ ರಜಾ ಅವಧಿಯಲ್ಲಿಯೇ ಎಸ್ ಎಸ್ ಎಲ್ ಸಿ ಪರೀಕ್ಷೆ- 1ರ ಮೌಲ್ಯಮಾಪನ ಕಾರ್ಯಗಳು ಹಾಗೂ ಲೋಕಸಭಾ ಚುನಾವಣೆಯ ಕಾರ್ಯಗಳನ್ನು ಮುಗಿಸಿರುತ್ತಾರೆ. ದಿನಾಂಕ 15.5 .2024 ರಿಂದ ವಿಶೇಷ ತರಗತಿಗಳನ್ನು ನಡೆಸಲು ಮಾಡಿರುವ ಆದೇಶವನ್ನು ರದ್ದುಪಡಿಸುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪ್ರೌಢ ಶಾಲೆಗಳ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಮೇಲ್ಮನೆಗೆ ಚುನಾವನೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರದ ಈ ಆದೇಶದಿಂದ ಶಿಕ್ಷಕರ ವಿರೋಧ ಎದುರಿಸಬೇಕಾಗುತ್ತದೆ ಎಂದು ಸರಕಾರಕ್ಕೆ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು ಮನವರಿಕೆ ಮಾಡಿದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬೇಸಿಗೆ ರಜೆಯನ್ನು ದಿನಾಂಕ 28 .5 2024ರ ವರೆಗೆ ಮುಂದುವರಿಸುವುದು ಹಾಗೂ ವಾರ್ಷಿಕ ಪರೀಕ್ಷೆ- 2ನ್ನು ಒಂದು ವಾರಗಳ ಕಾಲ ಮುಂದೂಡಿ ಈ ಕೂಡಲೇ ಆದೇಶ ಹೊರಡಿಸಬೇಕೆಂದು ಸೂಚಿಸಿದರು.
ಧನ್ಯವಾದ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೇಸಿಗೆ ರಜೆ ಮುಂದೂಡುವುದು ಮತ್ತು ವಾರ್ಷಿಕ ಪರೀಕ್ಷೆ-2ನ್ನು ಒಂದು ವಾರಗಳ ಕಾಲ ಮುಂದೂಡುವ ಆದೇಶಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಶಿಕ್ಷಕರ ಪರವಾಗಿ, ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆನ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡ ಪತ್ರಿಕಾ ಪ್ರಕಟಣೆ ಮೂಲಕ ಧನ್ಯವಾದ ಹೇಳಿದ್ದಾರೆ.
key words : Govt orders , postponement of summer vacation, postpones SSLC annual examination-II , by a week
SUMMARY:
The state government has withdrawn its order directing high school teachers to attend classes from May 15 to conduct special classes for SSLC students. The summer vacation will continue as usual till May 28.
The state government’s order curtailing the summer vacation and conducting special classes had evoked strong resentment from the high school teachers. In view of this, the government order has been reviewed and a revised order has been issued. Accordingly, May. The summer vacation will continue till The 28th.